ಕರ್ನಾಟಕ

karnataka

ETV Bharat / state

ಸಂಕಷ್ಟದಲ್ಲಿರುವ ಕಿರುತೆರೆ ಕಾರ್ಮಿಕರು, ಕಲಾವಿದರ ನೆರವಿಗೆ ಬಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ - Karnataka Television Association distributes essentials

ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿರುತೆರೆ ಕಾರ್ಮಿಕರು ಮತ್ತು ಕಲಾವಿದರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಅಗತ್ಯ ಸಾಮಗ್ರಿಗಳನ್ನು ವಿತರಿಸಿದೆ.

television workers and artists
television workers and artists

By

Published : Apr 15, 2020, 11:00 AM IST

ಬೆಂಗಳೂರು: ಲಾಕ್ ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಾರ್ಮಿಕರು ಹಾಗೂ ಕಲಾವಿದರಿಗೆ ನೆರವಾಗಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮುಂದಾಗಿದೆ.

ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಕಿರುತೆರೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಣ್ಣ ಕಲಾವಿದರು ಅರ್ಥಿಕ‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾರ್ಮಿಕರು ಹಾಗೂ ಕಲಾವಿದರ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲುಅಸೋಸಿಯೇಷನ್ ತೀರ್ಮಾನಿಸಿದೆ.

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್

ಈ ಬಗ್ಗೆ ಮಾತನಾಡಿರುವ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ್, ಈಗಾಗಲೇ ಸುಮಾರು 2500 ಮಂದಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನು ನೀಡಿದ್ದೇವೆ ಎಂದಿದ್ದಾರೆ.

ABOUT THE AUTHOR

...view details