ಬೆಂಗಳೂರು: ನಗರದಲ್ಲಿ ಇಂದು ಬಿಡುಗಡೆಯಾಗಿರುವ ಸಾರ್ವಜನಿಕ ಆಡಳಿತ ಸೂಚ್ಯಂಕ (ಪಿಎಐ)ದಲ್ಲಿ ಕರ್ನಾಟಕ ರಾಜ್ಯಕ್ಕೆ ಆರನೇ ಸ್ಥಾನ ಲಭಿಸಿದೆ. ಕೇಂದ್ರ ಸರ್ಕಾರದ ಮಾಹಿತಿ ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ವರದಿಯಲ್ಲಿ ಹರಿಯಾಣ ರಾಜ್ಯ ಮೊದಲ ಸ್ಥಾನ ಪಡೆದಿದೆ. ತಮಿಳುನಾಡು ದ್ವಿತೀಯ, ಕೇರಳ 3ನೇ ಸ್ಥಾನ ಗಳಿಸಿದೆ.
ಕರ್ನಾಟಕವು ಒಟ್ಟಾರೆ ಸಾಧನೆಯಲ್ಲಿ 6ನೇ ಸ್ಥಾನ ಗಳಿಸಿದೆ. 2021ನೇ ಸಾಲಿನಲ್ಲಿ ರಾಜ್ಯವು 7ನೇ ಸ್ಥಾನದಲ್ಲಿತ್ತು. ಈ ಸಾರಿ ರಾಜ್ಯದ ಸಾಧನೆ ಕೊಂಚ ಮೇಲಕ್ಕೇರಿದೆ. ಈ ಆಯ್ಕೆ ಪ್ರಕ್ರಿಯೆಗೆ ರಾಜ್ಯಗಳ ವಿಸ್ತೀರ್ಣ, ಜನಸಂಖ್ಯೆ ಆಧರಿಸಿ ದೊಡ್ಡ ಮತ್ತು ಸಣ್ಣ ರಾಜ್ಯಗಳನ್ನಾಗಿ ವರ್ಗ ಮಾಡಲಾಗುತ್ತದೆ. ಇವುಗಳನ್ನು ಕೇಂದ್ರ ಸರ್ಕಾರದ ಅಂಕಿ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.