ಕರ್ನಾಟಕ

karnataka

ETV Bharat / state

ತಿಂಗಳಲ್ಲಿ ರಾಜ್ಯದ ನಾಲ್ಕು ಕಡೆ ಕರಕುಶಲ ವಸ್ತು ಪ್ರದರ್ಶನ: ಈಟಿವಿ ಭಾರತ ಜೊತೆ ನಿಗಮ ಅಧ್ಯಕ್ಷರ ಮಾತು - ಬೆಂಗಳೂರು ಇತ್ತೀಚಿನ ಸುದ್ದಿ

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ರಾಜ್ಯದ ನಾಲ್ಕು ಕಡೆ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದರು.

Bengaluru
ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ

By

Published : Mar 8, 2021, 8:33 AM IST

Updated : Mar 8, 2021, 12:29 PM IST

ಬೆಂಗಳೂರು:ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಶನಿವಾರದಂದು ನಗರದ ಹೆಚ್​ಎಸ್​ಆರ್ ಬಡಾವಣೆಯ ವೈಟ್​ಹೌಸ್​ನಲ್ಲಿ ನಡೆಯಿತು. ಈ ಕಾರ್ಯಕ್ರಮ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿಯಿಂದ ವಿನೂತನ ಪ್ರಯತ್ನವಾಗಿ ಮೂಡಿ ಬಂದಿದೆ.

ಈ ವಿಶಿಷ್ಟ ಮೇಳವು ಕರ್ನಾಟಕ ರಾಜ್ಯ ಕರಕುಶಲ ನಿಗಮ ನಿಯಮಿತ ಮತ್ತು ಭಾರತ ಸರ್ಕಾರದ ಜವಳಿ ಮಂತ್ರಾಲಯದ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ರಾಘವೇಂದ್ರ ಶೆಟ್ಟಿ, "ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡುವ ಮತ್ತು ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರದರ್ಶನ ಏರ್ಪಡಿಸಲಾಗಿದ್ದು, ಮೇಳದಲ್ಲಿ ರಾಜ್ಯ, ಹೊರ ರಾಜ್ಯದಿಂದ ಕರಕುಶಲ ಕರ್ಮಿಗಳು ಭಾಗವಹಿಸಿದ್ದಾರೆ. ಈ ರೀತಿಯ ಮೇಳ ಕರಕುಶಲ ನಿಗಮದ ಇತಿಹಾಸದಲ್ಲಿ ಮೊದಲು ವಿನೂತನವಾಗಿ ವಿನ್ಯಾಸಗೊಳಿಸಲಾಗಿದ್ದು ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ" ಎಂದರು.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ

ನಿಗಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ರಾಜ್ಯದ ನಾಲ್ಕು ಕಡೆ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. 7 ದಿನಗಳ ಈ ವಸ್ತು ಪ್ರದರ್ಶನವು, ನಿಗಮದ ಹಾಗೂ ಕರಕುಶಲ ಅಭಿವೃದ್ಧಿ ಆಯುಕ್ತರ ಜವಳಿ ಮಂತ್ರಾಲಯದ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಹೊಸ ವಿನ್ಯಾಸದ ವಸ್ತುಗಳ ಪ್ರದರ್ಶನದ ಜೊತೆಗೆ ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ನಾನು ಸದಾಕಾಲವೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯದ ಬಹುತೇಕ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಇನ್ನೂ ಮೊಬೈಲ್ ವ್ಯಾನ್ ಮೂಲಕ ಮಾರಾಟ ಆರಂಭಿಸಲಾಗುತ್ತದೆ. ಕಲ್ಲಿನ ಕೆತ್ತನೆ, ಬಿದಿರಿನ ಕೆಲಸ, ಮಡಕೆ ತಯಾರಿಕೆ ಮುಂತಾದ ಕರಕುಶಲ ಕರ್ಮಿಗಳ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಇನ್ನೂ ಸುಮಾರು 12ಕ್ಕೂ ಹೆಚ್ಚು ಹೊಸ ಮಾರಾಟ ಮಳಿಗೆಗಳನ್ನು ತೆಗೆಯಲಾಗುವುದು ಎಂದರು.

ಒಂದೇ ತಿಂಗಳಲ್ಲಿ 4 ವಸ್ತು ಪ್ರದರ್ಶನ ಏರ್ಪಡಿಸಿದ್ದೇವೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್​​​​​ನ ವೈಟ್ ಹೌಸ್​ನ​ಲ್ಲಿ ಮತ್ತು ಮಡಿಕೇರಿ ಪ್ರಾರಂಭಗೊಂಡಿದೆ. ಇನ್ನು ತುಮಕೂರಿನ ಪೋಲಿಸ್ ಭವನದಲ್ಲಿ ಇದೇ 11ರಂದು ಮತ್ತು ಬೆಂಗಳೂರಿನ ಜಯನಗರದ ರಾಜಲಕ್ಷ್ಮಿ ಕಲ್ಯಾಣಮಂಟಪದಲ್ಲಿ 18ರಂದು ಪ್ರಾರಂಭವಾಗುವುದು ಎಂದು ಮಾಹಿತಿ ನೀಡಿದರು.

Last Updated : Mar 8, 2021, 12:29 PM IST

ABOUT THE AUTHOR

...view details