ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಕೆಲ ಸಚಿವರ ಖಾತೆ ಬದಲಾವಣೆ ನಂತರ ತಲೆದೂರಿರುವ ಅಸಮಾಧಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಅಸಮಾಧಾನಿತ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. .
ಅಸಮಾಧಾನಿತ ಸಚಿವರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಡೆಗೂ ನಾಲ್ವರು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ. ತಡ ರಾತ್ರಿವರೆಗೂ ಹಿರಿಯ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದ ಸಿಎಂ ಅಂತಿಮವಾಗಿ ಖಾತೆಗಳ ಮರು ಹಂಚಿಕೆ ಮಾಮಾಡಿದ್ದಾರೆ.
ಆರು ಸಚಿವರ ಖಾತೆಯಲ್ಲಿ ಮರು ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತ
1. ಕೆ.ಗೋಪಾಲಯ್ಯ - ಅಬಕಾರಿ ( ತೋಟಗಾರಿಕೆ ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿತ್ತು)
2. ಎಂಟಿಬಿ ನಾಗರಾಜ್ - ಪೌರಾಡಳಿತ, ಸಕ್ಕರೆ ( ಅಬಕಾರಿ ಖಾತೆ ಹಂಚಿಕೆ ಮಾಡಲಾಗಿತ್ತು)
3.ಆರ್.ಶಂಕರ್ - ತೋಟಗಾರಿಕೆ, ರೇಷ್ಮೆ.(ಪೌರಾಡಳಿತ, ರೇಷ್ಮೆ ಖಾತೆ ಹಂಚಿಕೆ ಮಾಡಲಾಗಿತ್ತು)
4. ಡಾ.ಕೆ.ಸಿ.ನಾರಾಯಣಗೌಡ - ಯುವಜನ ಕ್ರೀಡೆ, ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ( ಹಜ್ ಮತ್ತು ವಕ್ಫ್ ಖಾತೆ ವಾಪಸ್ ಪಡೆಯಲಾಗಿದೆ)
5. ಜೆ.ಸಿ ಮಾಧುಸ್ವಾಮಿ- ವೈದ್ಯಕೀಯ ಶಿಕ್ಷಣ, ವಕ್ಫ್, ಹಜ್ ಖಾತೆ ನೀಡಲಾಗಿದೆ.(ಕನ್ನಡ ಮತ್ತು ಸಂಸ್ಕೃತಿ ಖಾತೆ ವಾಪಸ್ ಪಡೆಯಲಾಗಿದೆ)
6. ಅರವಿಂದ ಲಿಂಬಾವಳಿ- ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ಹೆಚ್ಚುವರಿಯಾಗಿ ನೀಡಲಾಗಿದೆ.
ಸದ್ಯದಲ್ಲೇ ಖಾತೆಗಳ ಮರುಹಂಚಿಕೆ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ರಾಜಭವನಕ್ಕೆ ಕಳುಹಿಸಿಕೊಡಲಿದ್ದು, ರಾಜ್ಯಪಾಲರು ಅಂಕಿತ ಹಾಕಿದ ನಂತರ ಮರು ಹಂಚಿಕೆ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.
ಸುಧಾಕರ್ ಖಾತೆಯಲ್ಲಿ ಬದಲಿಲ್ಲ:ಸಂಪುಟದಲ್ಲಿ ಖಾತೆ ಬದಲಾವಣೆ ನಂತರ ಎದ್ದಿದ್ದ ಭಿನ್ನಮತ ಶಮನಗೊಳಿಸಲು ಸಿಎಂ ಯಡಿಯೂರಪ್ಪ ಖಾತೆ ಮರು ಹಂಚಿಕೆ ಮಾಡುತ್ತಿದ್ದಾರೆ. ಆದರೆ ಸಚಿವ ಸುಧಾಕರ್ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಗಳಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ ಪಡೆದು ಮಾಧುಸ್ವಾಮಿ ಅವರಿಗೆ ಕೊಡಲಾಗಿದೆ ಇದರಿಂದ ಸುಧಾಕರ್ ಅಸಮಾಧಾನಗೊಂಡಿದ್ದು, ಅವರ ನಿವಾಸದಲ್ಲೇ ಅಸಮಾಧಾನಿತ ಸಚಿವರ ಸಭೆ ನಡೆಸಿದ್ದರು. ಆದರೂ ಸುಧಾಕರ್ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡದೇ ಇತರ ನಾಲ್ವರು ಸಚಿವರಿಗೆ ಮಾತ್ರ ಖಾತೆಗಳ ಮರು ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.