ಕರ್ನಾಟಕ

karnataka

ETV Bharat / state

KSFC Jobs: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿದೆ ಉದ್ಯೋಗ: 41 ಡೆಪ್ಯೂಟಿ ಮ್ಯಾನೇಜರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಭರ್ತಿಗೆ ಮರು ಅಧಿಸೂಚನೆ ಪ್ರಕಟ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಹುದ್ದೆಗಳಿವೆ. ಅರ್ಹತೆ, ಅರ್ಜಿ ಸಲ್ಲಿಕೆ, ನೇಮಕಾತಿ ಪ್ರಕ್ರಿಯೆ, ಸಂಬಳದ ಬಗ್ಗೆ ತಿಳಿಯಬೇಕೇ? ಇಲ್ಲಿದೆ ಸಂಪೂರ್ಣ ವಿವರ.

KSFC Jobs alert for Graduates
KSFC Jobs alert for Graduates

By

Published : Jun 29, 2023, 3:15 PM IST

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ (ಕೆಎಸ್‌ಎಫ್‌ಸಿ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಮರು ಅಧಿಸೂಚನೆ ಪ್ರಕಟಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಡೆಪ್ಯೂಟಿ ಮ್ಯಾನೇಜರ್​​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜುಲೈ 7. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಅಧಿಸೂಚನೆ

ಹುದ್ದೆಗಳ ವಿವರ: ಡೆಪ್ಯೂಟಿ ಮ್ಯಾನೇಜರ್​​ (ತಾಂತ್ರಿಕ)- 11, ಡೆಪ್ಯೂಟಿ ಮ್ಯಾನೇಜರ್​​ (ಕಾನೂನು)- 18, ಡೆಪ್ಯೂಟಿ ಮ್ಯಾನೇಜರ್​​ (ಹಣಕಾಸು ಮತ್ತು ಅಕೌಂಟ್ಸ್‌​)- 12.

ವಿದ್ಯಾರ್ಹತೆ : ಪದವಿ, ಕಾನೂನು ಪದವಿ, ಎಸಿಎ, ಐಸಿಡಬ್ಲ್ಯೂಎ, ಎಂಬಿಎ, ಎಂ.ಕಾಂ, ಸಿಎಫ್​ಎ ಮತ್ತು ಪಿಜಿಡಿಎಂಎ ಪದವಿ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 25ರಿಂದ ಗರಿಷ್ಠ 35 ವರ್ಷ. ಪ್ರವರ್ಗ 2ಎ, 2ಬಿ, ಪ್ರ 3ಎ ಮತ್ತು ಪ್ರ 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ವಿಶೇಷಚೇತನ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 1,500 ರೂ, ಇತರೆ ಅಭ್ಯರ್ಥಿಗಳಿಗೆ 2,000 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಅರ್ಜಿಯನ್ನು ಡಿಡಿ ಮೂಲಕ ತುಂಬಬೇಕು.

ಆಯ್ಕೆ ವಿಧಾನ :ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈವಾ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಪಿಎಸ್​ಸಿಯಿಂದ ನಡೆಸುವ ಕಡ್ಡಾಯ ಕನ್ನಡ ಭಾಷೆಯಲ್ಲಿ ತೇರ್ಗಡೆ ಹೊಂದಬೇಕು. ಮಾಸಿಕ ವೇತನ 52,650 ರೂಪಾಯಿಯಿಂದ 97,100 ರೂಪಾಯಿವರೆಗೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರ ಮತ್ತು ದಾಖಲಾತಿ ಸೇರಿದಂತೆ ಎಲ್ಲ ಅರ್ಜಿಗಳನ್ನು ಕಡೆಯ ದಿನಾಂಕಕ್ಕೂ ಮುನ್ನವೇ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.

ವಿಳಾಸ: ಮ್ಯಾನೇಜಿಂಗ್​ ಡೈರೆಕ್ಟರ್​​, ಕೆಎಸ್​ಎಫ್​ಸಿ ಮುಖ್ಯ ಕಚೇರಿ, ಕೆಎಸ್​ಎಫ್​ಸಿ ಭವನ, ನಂ1/1, ತಿಮ್ಮಾಯ್ಯ ರಸ್ತೆ, ಬೆಂಗಳೂರು- 560052

ಅರ್ಜಿ ಸಲ್ಲಿಕೆ ಜೂನ್​ 14ರಿಂದ ಆರಂಭವಾಗಿದೆ. ಜುಲೈ 7 ಕಡೆಯ ದಿನಾಂಕ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗಳನ್ನು ವೀಕ್ಷಿಸಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧಿಕೃತ ಜಾಲತಾಣ ksfc.in ಗೆ ಭೇಟಿ ನೀಡಿ.

ಇದನ್ನೂ ಓದಿ: ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಭರ್ಜರಿ ನೇಮಕಾತಿ: 4062 ಶಿಕ್ಷಕ, ಶಿಕ್ಷಕೇತರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

ABOUT THE AUTHOR

...view details