ಕರ್ನಾಟಕ

karnataka

ETV Bharat / state

ಕರ್ನಾಟಕ ಸ್ಟಾಂಪ್ ವಿಧೇಯಕ ಮಂಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ - session news

ಕಂದಾಯ ಸಚಿವ ಆರ್. ಅಶೋಕ್ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು 2020ನೇ ಸಾಲಿನ ಕರ್ನಾಟಕ ಸ್ಟಾಂಪ್ (2ನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.

ಸಚಿವ ಜೆ.ಸಿ. ಮಾಧುಸ್ವಾಮಿ
ಸಚಿವ ಜೆ.ಸಿ. ಮಾಧುಸ್ವಾಮಿ

By

Published : Dec 8, 2020, 4:47 PM IST

ಬೆಂಗಳೂರು: ಕರ್ನಾಟಕ ಕೈಗಾರಿಕಾ ನೀತಿ 2020-25ರಲ್ಲಿ ಪ್ರಸ್ತಾಪಿಸಿರುವ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದ 2020ನೇ ಸಾಲಿನ ಕರ್ನಾಟಕ ಸ್ಟಾಂಪ್ (2ನೇ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.

ಕಂದಾಯ ಸಚಿವ ಆರ್. ಅಶೋಕ್ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಈ ವಿಧೇಯಕವನ್ನು ಮಂಡಿಸಿದರು. 2020-21ರ ಆಯವ್ಯಯ ಗಾತ್ರದಲ್ಲಿ ಪ್ರಸ್ತಾಪಿಸಿರುವ 35 ಲಕ್ಷ ರೂ.ವರೆಗಿನ ಫ್ಲಾಟ್ ಅಥವಾ ಅಪಾರ್ಟ್‍ಮೆಂಟ್‍ನ ಮೊದಲ ಮಾರಾಟಕ್ಕೆ ಸ್ಟಾಂಪ್ ತೆರಿಗೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ವಿದೇಯಕ ಹೊಂದಿದೆ. ಈ ಉದ್ದೇಶ ಸ್ಥಾಪಿಸಲು ಈಗಲೂ ಆಧ್ಯಾದೇಶವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಕರ್ನಾಟಕ ಸ್ಟಾಂಪ್ ಅನಿಯಮ 1957ನ್ನು ಮತ್ತಷ್ಟು ತಿದ್ದುಪಡಿ ಮಾಡುವುದನ್ನು ವಿದೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಓದಿ:ಜೂಜು ಮತ್ತು ಡ್ರಗ್ಸ್ ಮಟ್ಟ ಹಾಕಲು ಮತ್ತಷ್ಟು ಬಿಗಿ ಕ್ರಮ : ಗೃಹ ಸಚಿವ ಬೊಮ್ಮಾಯಿ

ಪೂರಕ ಅಂದಾಜು ಮಂಡನೆ:ಪ್ರಶ್ನೋತ್ತರ ಅವಧಿ ನಂತರ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಉಪಾಸಭಾಧ್ಯಕ್ಷ ಆನಂದ್ ಮಾಮನಿ ಅವರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಾಂತಿಸಾಗರ ಕೆರೆಯಲ್ಲಿ ಬೆಂಗಳೂರಿನ ಸೆರೋಲಿ ಸಲ್ಲೋಷನ್ ಇವರು ವಿದ್ಯುತ್ ಗಾರವನ್ನು ಸ್ಥಾಪಿಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ರದ್ದುಪಡಿಸುವುದು ಹಾಗೂ ಕಂದಾಯ ಇಲಾಖೆಯಲ್ಲಿ ಕೃಷಿ ಭೂಮಿ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ ಇದ್ದರೂ ಜಾರಿಯಾಗದೇ ಇರುವ ಬಗ್ಗೆ ಅರ್ಜಿಗಳನ್ನೊಪ್ಪಿಸಿದರು. ನಂತರ ಸಚಿವ ಮಾಧುಸ್ವಾಮಿ ಅವರು, 2020ನೇ ಸಾಲಿನ ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆಗಳು, ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ವಿಧೇಯಕವನ್ನು ಮಂಡಿಸಿದರು.

ABOUT THE AUTHOR

...view details