ಕರ್ನಾಟಕ

karnataka

ETV Bharat / state

ವಾರಾಣಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ: ಜಾಗ ನೀಡಲು ಒಪ್ಪಿದ ಯುಪಿ ಸರ್ಕಾರ

ವಾರಾಣಸಿಯ ಸಾರಂಗ್ ತಲಾಬ್ ಪದ್ರೇಶದಲ್ಲಿ ಕೆಎಸ್‌ಎಂಬಿ ಶಾಖೆ ತೆರೆಯಲು ನೀಡಲು ಒಪ್ಪಿರುವ ಕಟ್ಟಡದ ಜಾಗಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿದರು. ‌

karnataka-silk-market-to-start-in-varanasi
ವಾರಾಣಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ

By

Published : Nov 19, 2021, 10:59 AM IST

ಬೆಂಗಳೂರು/ವಾರಾಣಸಿ:ವಾರಾಣಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ(Karnataka silk market) ಸ್ಥಾಪನೆಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸ್ಪಂದಿಸಿದೆ.

ವಾರಣಾಸಿಯ (Varanasi) ಸಾರಂಗ್ ತಲಾಬ್ ಪ್ರದೇಶದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ(Karnataka Silk Sales Board) ಶಾಖೆ ತೆರೆಯಲು ಯುಪಿ ಸರ್ಕಾರ ಜಾಗ ನೀಡಲು ಒಪ್ಪಿಕೊಂಡಿದೆ.

ಸಾರಂಗ್ ತಲಾಬ್ ಪದ್ರೇಶದಲ್ಲಿ ಕೆಎಸ್‌ಎಂಬಿ(KSMB) ಶಾಖೆ ತೆರೆಯಲು ನೀಡಲು ಒಪ್ಪಿರುವ ಕಟ್ಟಡದ ಜಾಗಕ್ಕೆ ಸಚಿವ ಡಾ.ನಾರಾಯಣಗೌಡ(Minister Narayanagowda) ಅವರು ಭೇಟಿ ನೀಡಿದರು. ‌ಕೆಎಸ್ಎಂಬಿ ಕಚೇರಿ ಹಾಗೂ ಗೋದಾಮಿಗೆ ನೀಡಲು ಉದ್ದೇಶಿಸಿರುವ ಕಟ್ಟಡ ಪರಿಶೀಲನೆ ಕೂಡಾ ನಡೆಸಿದರು.

ಅಧಿಕಾರಿಗಳೊಂದಿಗೆ ಸಚಿವರು

ಶೀಘ್ರವೇ ಯುಪಿ ಸರ್ಕಾರದ(UP Government) ಜೊತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ:Big Breaking.. ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿ ಮೋದಿ ಘೋಷಣೆ..!

For All Latest Updates

ABOUT THE AUTHOR

...view details