ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್ನ ಮೊದಲ ಹೊಡೆತಕ್ಕೆ ಸಿಲುಕಿ ಇಡೀ ರಾಜ್ಯದ ಜನರ ಜೀವನವೇ ಅತಂತ್ರವಾಗಿತ್ತು. ಇಡೀ ಒಂದು ವರ್ಷವೇ ಕೋವಿಡ್ ಆವರಿಸಿತ್ತು. ಇನ್ನೇನು ಕೊರೊನಾ ಸಂಕಷ್ಟ ಮುಗಿತು ಎನ್ನುವಾಗಲೇ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ, ಕೊರೊನಾ ಎರಡನೇ ಅಲೆ ಅಪ್ಪಳಿಸಬಹುದು ಅಂತ ಎಚ್ಚರಿಕೆ ನೀಡಿತ್ತು ಎಂದರು.
ಇದಕ್ಕೆ ಕಾರಣವಾಗಿದ್ದು ಡಿಸೆಂಬರ್ನಲ್ಲಿ ಬದಲಾದ ವಾತಾವರಣ. ಈ ತಿಂಗಳಲ್ಲಿ ಹೆಚ್ಚು ಶೀತ ವಾತಾವರಣ ಇರಲಿದ್ದು, ಚಳಿಗೆ ವೈರಸ್ ಇನ್ನಷ್ಟು ಹರಡುವ ಸಾಧ್ಯತೆ ಇದೆ. ಜನರು ಸ್ವಲ್ಪ ಮುನ್ನೆಚ್ಚರಿಕೆ ತಪ್ಪಿದರೂ ಮತ್ತೆ ಕೊರೊನಾಗೆ ಲಕ್ಷಾಂತರ ಜನರು ತುತ್ತಾಗುವ ಸಾಧ್ಯತೆ ಇತ್ತು. ಆದರೆ ಸರ್ಕಾರದ ಕ್ರಮ ಹಾಗೂ ಜನರಿಗೆ ಕೊರೊನಾ ಬಗೆಗಿನ ಜಾಗೃತಿಯಿಂದ ಇದೀಗ ಎರಡನೇ ಅಲೆಯಿಂದ ಬಚಾವ್ ಆಗಿದ್ದೇವೆ ಎಂದು ಸಚಿವರು ಹೇಳಿದರು.
ಕೊರೊನಾ ಬಗ್ಗೆ ಮಾಹಿತಿ ನೀಡಿದ ಸಚಿವ ಸುಧಾಕರ್ ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಾತಾನಾಡಿದ್ದು, ಟಾಸ್ಕ್ ಫೋರ್ಸ್ ಕಮಿಟಿ ಕೊರೊನಾ ಎರಡನೇ ಅಲೆ ಬಗ್ಗೆ ಎಚ್ಚರಿಕೆ ನೀಡಿತ್ತು. ಅವರ ಅಭಿಪ್ರಾಯದ ಪ್ರಕಾರ ಡಿಸೆಂಬರ್ ಮೊದಲ ವಾರದಲ್ಲೇ ಶುರುವಾಗಬೇಕಿತ್ತು. ಆದರೆ ಇದನ್ನೂ ಮೀರಿ ಈಗ ನಿತ್ಯ ಬರುತ್ತಿರುವ ವರದಿ ಗಮನಿಸಿದ್ರೆ ರಾಜ್ಯದಲ್ಲಿ ಮರಣ ಪ್ರಮಾಣ 1.3ರಷ್ಟು ಕಡಿಮೆ ಆಗಿದೆ. ಪಾಸಿಟಿವ್ ಪ್ರಮಾಣ ಕೂಡ ಇಳಿಕೆಯಾಗಿದೆ ಎಂದರು.
ಮತ್ತೊಮ್ಮೆ ಸಿರೋ ಸರ್ವೇ
ಮತ್ತೊಮ್ಮೆ ಕಮಿಟಿಯಲ್ಲಿ ಸಿರೋ ಸರ್ವೇ ಮಾಡುವಂತೆ ತೀರ್ಮಾನ ಮಾಡಲಾಗಿದೆ. ಸರ್ವೇ ವರದಿ ಬಂದ ನಂತರ ಯಾವ ಯಾವ ಜಿಲ್ಲೆಯಲ್ಲಿ ಎರಡನೇ ಅಲೆ ಅಪ್ಪಳಿಸಲಿದೆ ಎಂಬುದು ತಿಳಿಯಲಿದೆ. ವರದಿ ಬಂದ ಬಳಿಕ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತೆ ಎಂದರು.