ಕರ್ನಾಟಕ

karnataka

ETV Bharat / state

Karnataka rice row: ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ: ಡಿ ಕೆ ಶಿವಕುಮಾರ್ - ಡಿ ಕೆ ಶಿವಕುಮಾರ್

ರಾಜ್ಯಕ್ಕೆ ಬೇರೆ ರಾಜ್ಯದಿಂದ ಅಕ್ಕಿ ತರುವ ಬಗ್ಗೆ ಮಾತುಕತೆ ನಡೆದಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

By

Published : Jun 22, 2023, 3:22 PM IST

Updated : Jun 22, 2023, 5:30 PM IST

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : ನಾವು ಯಾರನ್ನೂ ಅಕ್ಕಿ ಪುಕ್ಸಟ್ಟೆ ಕೊಡಿ ಎಂದು ಕೇಳ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಆಪ್ಷನ್ ನೋಡ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ, ಅಕ್ಕಿಯನ್ನ ಬೇರೆ ರಾಜ್ಯದಿಂದ ತರುವ ಬಗ್ಗೆ ಮಾತುಕತೆ ನಡೆದಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ತೇವೆ ಎಂದರು.

ಸಿಎಂ, ಸಚಿವರು ದೆಹಲಿಗೆ ಹೋಗಿ ಯಾರನ್ನ ಭೇಟಿಯಾಗಿದ್ದಾರೆ, ಏನು ಮಾಡಿದ್ದಾರೋ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ಹೋಗುವ ಟೈಮ್ ಬರುತ್ತದೆ, ಹೋಗ್ತೇನೆ ಎಂದು ಹೇಳಿದರು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಮೆದುಳು ಇರಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಉದ್ಯೋಗ ಸೃಷ್ಟಿ ಮಾಡ್ತೀನಿ, 15 ಲಕ್ಷ ಕೊಡ್ತೀನಿ, ಕಪ್ಪು ಹಣ ತರ್ತೀನಿ ಎಂದು ಮಾತಾಡಿದ್ರು. ಏಕೆ ಮಾತಾಡಿದ್ರು?. 5 ವರ್ಷದಲ್ಲಿ ಅವರ ಪ್ರಣಾಳಿಕೆ ಪೂರ್ಣ ಮಾಡಲಿಲ್ಲ. ನಾವು ಮಾಡ್ತಿದ್ದೇವೆ. ನಮಗೆ ಬಡವರ ಬಗ್ಗೆ ಕಾಳಜಿ ಇದೆ ಎಂದು ತಿರುಗೇಟು ಕೊಟ್ಟರು.

ಕಾಂಗ್ರೆಸ್ ನಾಯಕರಿಗೆ ಜ್ಞಾನ ಇರಲಿಲ್ವಾ ಎಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮಗೆ ಖಂಡಿತ ಜ್ಞಾನ ಇರಲಿಲ್ಲ. ಕುಮಾರಣ್ಣಗೆ ಜ್ಞಾನ ಇತ್ತಲ್ಲಾ.. ಸಾಕು. ಪ್ರಧಾನಿ ತಮ್ಮ ಬಳಿ ಅಲ್ಲದಿದ್ರೂ, ವಿದೇಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನೀವು ಖುಷಿ ಪಡಿ ಎಂದು ಛೇಡಿಸಿದರು.

ಉಪನ್ಯಾಸಕರ ನೇಮಕಾತಿಯಲ್ಲಿ ತಮ್ಮನ್ನು ಪರಿಗಣಿಸುವಂತೆ ಅತಿಥಿ ಉಪನ್ಯಾಸಕರು ಇಂದು ಡಿಸಿಎಂ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದರು. ಅತಿಥಿ ಉಪನ್ಯಾಸಕರ ಮನವಿಗೆ ಡಿಸಿಎಂ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅತಿಥಿ ಉಪನ್ಯಾಸಕರು

ಆಗಸ್ಟ್ ಒಳಗೆ ಅಕ್ಕಿ ಕೊಡುತ್ತೇವೆ : ಇನ್ನೊಂದೆಡೆ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಅವರು ಮಾಧ್ಯಮಗಳ ಜತೆ ಮಾತನಾಡಿ, ಆಗಸ್ಟ್ ಒಂದನೇ ತಾರೀಖಿಗಿಂತ ಮೊದಲು ಅಕ್ಕಿ ಕೊಡುತ್ತೇವೆ. ನಿನ್ನೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಭೇಟಿಗೆ ಹೋಗಿದ್ವಿ. ಸಮಯ ಕೊಡಲಿಲ್ಲ. ರಾಜ್ಯ ಖಾತೆ ಸಚಿವರನ್ನು ಕೂಡ ಭೇಟಿಯಾಗಲು ಸಮಯ ಕೇಳಿದ್ವಿ. ಇವತ್ತು 10 ಗಂಟೆಗೆ ಸಮಯ ನಿಗದಿ ಮಾಡಿದ್ದರು. ಅದನ್ನು ಕೂಡ ಮುಂದಕ್ಕೆ ಹಾಕಿದರು. ಅವರ ಉದ್ದೇಶ ಬಹಳ ಸ್ವಷ್ಟವಾಗಿದೆ. ಬಡವರಿಗೆ ಅಕ್ಕಿ ಕೊಡಲು ಅವರು ಸಹಕಾರ ಕೊಡ್ತಿಲ್ಲ. ಅಕ್ಕಿ ವಿಚಾರವನ್ನ ಅವರು ರಾಜಕೀಯವಾಗಿ ತೆಗೆದುಕೊಂಡಿದ್ದಾರೆ. ಬಡವರಿಗೆ ಕೊಡುವ ಅನ್ನದಲ್ಲಿ ಆಟವಾಡುತ್ತಿದ್ದಾರೆ. ನಾವು ಜವಾಬ್ದಾರಿಯುತವಾಗಿ ಮಾತು ಕೊಟ್ಟಿದ್ದೇವೆ ಎಂದರು.

ನಾವು ಪುಕ್ಸಟ್ಟೆ ಕೇಳಿಲ್ಲ, ಹಣವನ್ನ ಕೊಡುತ್ತೇವೆ: ನನ್ನ ಜವಾಬ್ದಾರಿ ಆದಷ್ಟು ಬೇಗ ರಾಜ್ಯದ ಜನರಿಗೆ ಅಕ್ಕಿ ಕೊಡೋದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು. ದೆಹಲಿಯಲ್ಲಿ ಪ್ರಾದೇಶಿಕ ಆಯುಕ್ತರ ಮೂಲಕ ಕೂಡ ಭೇಟಿಗೆ ಪ್ರಯತ್ನ ಮಾಡಿದ್ವಿ. ಅವರು ಊರಿನಲ್ಲಿ ಇಲ್ಲ ಎಂದು ಉತ್ತರ ಬಂತು. ಕೇಂದ್ರದ ರಾಜ್ಯ ಖಾತೆ ಸಚಿವರ ಭೇಟಿಗೆ ಸಮಯ ನೀಡಿ, ಬಳಿಕ ಮುಂದಕ್ಕೆ ಹಾಕಿದರು. ಇವೆಲ್ಲವನ್ನೂ ನೋಡಿದರೆ ಅವರ ಮನಸ್ಥಿತಿ ಕರ್ನಾಟಕ ರಾಜ್ಯಕ್ಕೆ ಬಡವರಿಗೆ ಅಕ್ಕಿ ಕೊಡಲು ಇಷ್ಟ ಇಲ್ಲ. ನಾವು ಪುಕ್ಸಟ್ಟೆ ಕೇಳಿಲ್ಲ, ಹಣವನ್ನ ಕೊಡುತ್ತೇವೆ ಅಂತ ಹೇಳಿದ್ದೇವೆ ಎಂದು ವಿವರಿಸಿದರು.

ಪಂಜಾಬ್​ನವರು ಅಕ್ಕಿ ಕೊಡುತ್ತೇವೆ ಎಂದಿದ್ದಾರೆ: ಈಗ ನಮ್ಮದೇ ಆದಂತ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಿಂದ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡ್ತಿದ್ದೇವೆ. ಕೇಂದ್ರದ ಸಂಸ್ಥೆಗಳಿವೆ, ಎನ್​ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ ಮುಖಾಂತರ ಖರೀದಿ ಮಾಡುತ್ತೇವೆ. ಅಲ್ಲಿಂದ ಅಕ್ಕಿಯನ್ನು ಸರಬರಾಜು ಮಾಡಿಕೊಂಡು ಜನರಿಗೆ ಕೊಡುತ್ತೇವೆ. ಛತ್ತೀಸ್‌ಗಢದವರು 1.5 ಲಕ್ಷ ಟನ್ ಅಕ್ಕಿ ಕೊಡ್ತೇವೆ ಅಂದಿದ್ದಾರೆ. ತೆಲಂಗಾಣದವರು ಗೋಧಿ ಕೊಡುತ್ತೇವೆ ಎಂದಿದ್ದಾರೆ. ಪಂಜಾಬ್​ನವರು ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ರಾಜ್ಯಗಳಿಂದ ನಮಗೆ ಸಾರಿಗೆ ವೆಚ್ಚ ಜಾಸ್ತಿ ಆಗಲಿದೆ ಎಂದು ಸಚಿವರು ಹೇಳಿದರು.

ಬೇರೆ ವ್ಯವಸ್ಥೆ ಮಾಡಿಕೊಂಡಿದ್ದೇವೆ : ಕೇಂದ್ರದ ಸಂಸ್ಥೆಗಳಾದರೆ ಅವರೇ ತರಿಸಿಕೊಂಡು ನಮಗೆ ಡೆಲಿವರಿ ಕೊಡುತ್ತಾರೆ. ಈ ವಾರದಲ್ಲಿ ರೇಟ್ ಫಿಕ್ಸ್ ಮಾಡಿ ಆನಂತರ ಖರೀದಿಸುತ್ತೇವೆ. ಕೇಂದ್ರ ಸರ್ಕಾರ ಕೊಡಲ್ಲ ಎನ್ನುವ ಕಾರಣಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜುಲೈ ಒಂದಕ್ಕೆ ಸ್ವಲ್ಪ ತಡವಾಗುತ್ತದೆ. ಆಗಸ್ಟ್ ಒಂದನೇ ತಾರೀಖಿಗಿಂತ ಮೊದಲು ಅಕ್ಕಿ ಕೊಡುತ್ತೇವೆ ಎಂದು ಸಚಿವ ಮುನಿಯಪ್ಪ ಭರವಸೆ ಕೊಟ್ಟರು.

ಇದನ್ನೂ ಓದಿ:ಅಕ್ಕಿ ವಿತರಣೆಯಲ್ಲಿ ರಾಜಕೀಯ ಬೇಡ: ಅಮಿತ್‌ ಶಾಗೆ ಸಿಎಂ ಮನವಿ

Last Updated : Jun 22, 2023, 5:30 PM IST

ABOUT THE AUTHOR

...view details