ಬೆಂಗಳೂರು :ಕರ್ನಾಟಕ ನಿವಾಸಿ ವೈದ್ಯರ ಸಂಘ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮತ್ತೊಮ್ಮೆ ಪ್ರತಿಭಟಿಸಲು ಸಜ್ಜಾಗುತ್ತಿದೆ.
2018-19ರ ಶೈಕ್ಷಣಿಕ ವರ್ಷದ ಪ್ರಕಾರ, ಶೈಕ್ಷಣಿಕ ಶುಲ್ಕವನ್ನು ಪುನಾರಚಿಸಬೇಕು. ಕೋವಿಡ್ ಅಪಾಯ ಭತ್ಯೆಗೆ ತಕ್ಷಣವೇ ಹಣವನ್ನು ಮಂಜೂರು ಮಾಡಬೇಕು ಹಾಗೂ ಸ್ನಾತಕೋತ್ತರ ಪದವೀಧರರು ಮತ್ತು ಇಂಟರ್ನ್‌ಗಳಿಗೆ ಸಕಾಲದಲ್ಲಿ ಸ್ಟೈ ಫಂಡ್ ಪಾವತಿಸಲು ಬೇಡಿಕೆ ಇಟ್ಟಿದ್ದಾರೆ.
ಕರ್ನಾಟಕ ಸರ್ಕಾರ 6 ತಿಂಗಳಾದರೂ ಕೋವಿಡ್ ಭತ್ಯೆ ನೀಡಿಲ್ಲ ಮತ್ತು ನಮ್ಮ ಶುಲ್ಕವನ್ನು ಕಡಿಮೆ ಮಾಡಿಲ್ಲ. ಸಚಿವ ಸುಧಾಕರ್ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಈವರೆಗೆ ಯಾವುದೂ ಈಡೇರಿಲ್ಲ. ಇದರಿಂದ ಬೇಸತ್ತ ನಾವು ನಾಳೆಯಿಂದ(29 ನವೆಂಬರ್) ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುತ್ತಿರುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಒಂದು ವರ್ಷದಿಂದ ಕರ್ನಾಟಕದಾದ್ಯಂತ ಆರೋಗ್ಯ ರಕ್ಷಣಾ ಕಾರ್ಯಕರ್ತರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಶ್ರಮಿಸಿದ್ದಾರೆ. ಎಲ್ಲಾ ನಿವಾಸಿ ವೈದ್ಯರಿಗೆ ಏಪ್ರಿಲ್ ತಿಂಗಳಿನಿಂದ ತಿಂಗಳಿಗೆ 10,000 ಕೋವಿಡ್ ಭತ್ಯೆ ಘೋಷಿಸಲಾಗಿತ್ತು.
ಇದರ ಪ್ರಕಟಣೆಯ ದಿನದಿಂದ 6 ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ಆದರೆ, ಸರ್ಕಾರ ಇನ್ನೂ ಹಣವನ್ನು ಬಿಡುಗಡೆ ಮಾಡಿಲ್ಲ. ಇದು ಇಂದಿಗೂ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಬಗ್ಗೆ ಅಸ್ಪಷ್ಟ ಅಲಕ್ಷ್ಯವನ್ನು ತೋರಿದ್ದಾರೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ಶುಲ್ಕವನ್ನು ₹30,000 ದಿಂದ ₹1,20,000ಕ್ಕೆ ಏರಿಸಲಾಯಿತು. ಇದು ಸುಮಾರು ಶೇ.40ರಷ್ಟು ಹೆಚ್ಚಳವಾಗಿದೆ. ಈ ತೊಂದರೆಯ ಸಮಯದಲ್ಲಿ ಯಾವುದೇ ರಿಯಾಯಿತಿ ಇಲ್ಲದೆ ನಾವು ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಮಾಡಲಾಗಿದೆ.
ಮೇಲಿನ ಎಲ್ಲಾ ವಿಷಯಗಳ ಹಿನ್ನೆಲೆಯಲ್ಲಿ MMCRI ಮೈಸೂರಿನ ನಿವಾಸಿ ವೈದ್ಯರು ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಬಹಿಷ್ಕಾರದ ಮೂಲಕ ನವೆಂಬರ್ 9ರಿಂದ ಯಾವುದೇ ತುರ್ತು ಸೇವೆಗಳಿಗೆ ಅಡ್ಡಿಯಾಗದಂತೆ ಅನಿರ್ದಿಷ್ಟ ಮುಷ್ಕರವನ್ನು ನಡೆಸುವಲ್ಲಿ ಮುಂದಾಳತ್ವವಹಿಸಿದರು.
ಈ ಸಮಸ್ಯೆಯನ್ನು 10 ದಿನಗಳಲ್ಲಿ ಪರಿಹರಿಸಲು ವೈದ್ಯಕೀಯ ಶಿಕ್ಷಣ ಸಚಿವರು ನೀಡಿದ ಭರವಸೆಯ ಆಧಾರದ ಮೇಲೆ ಮುಷ್ಕರವನ್ನು ತಡೆಹಿಡಿಯಲಾಯಿತು.
ಇದೀಗ, ವೈದ್ಯಕೀಯ ಶಿಕ್ಷಣ ಸಚಿವರು ನೀಡಿದ ಭರವಸೆ ಈಡೇರದ ಕಾರಣ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗುತ್ತಿದ್ದಾರೆ. ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಒಪಿಡಿಗಳು ಮತ್ತು ಎಲೆಕ್ಟಿವ್ ಒಟಿಗಳು (ತುರ್ತು ಸೇವೆಗಳನ್ನು ಹೊರತುಪಡಿಸಿ) ಸೇರಿದಂತೆ ಎಲ್ಲಾ ಚುನಾಯಿತ ಸೇವೆಗಳನ್ನು ಬಂದ್ ಮಾಡುವುದಾಗಿ ಹೇಳಿದ್ದಾರೆ.
ಓದಿ:ಗಡಿಯಲ್ಲಿ 'ಮೈಮರೆತ್ತಿದ್ದ' ಕಲಬುರಗಿ ಜಿಲ್ಲಾಡಳಿತ.. ಚುರುಕು ಮುಟ್ಟಿಸಿದ ಈಟಿವಿ ಭಾರತ್ ವರದಿ..