ಕರ್ನಾಟಕ

karnataka

ETV Bharat / state

ಕರ್ನಾಟಕ ಕೋವಿಡ್​: 9,579 ಹೊಸ ಪ್ರಕರಣ ಪತ್ತೆ, 52 ಜನರು ಸಾವು - ಕರ್ನಾಟಕ ಕೋವಿಡ್

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಕೂಡ ಐದು ಸಾವಿರ ಗಡಿ ದಾಟಿದ್ದು, ಒಂದೇ ದಿನ 52 ಜನರು ಸಾವನ್ನಪ್ಪಿದ್ದಾರೆ.

Karnataka Covid
Karnataka Covid

By

Published : Apr 12, 2021, 7:00 PM IST

ಬೆಂಗಳೂರು:ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 9,579 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 52 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ವಿವಿಧ ಆಸ್ಪತ್ರೆಗಳಿಂದ 2,767 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದು, ಇಲ್ಲಿಯವರೆಗೆ 9,85,924 ಜನರು ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 10,74,869 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಇದರಲ್ಲಿ 75,985 ಸಕ್ರೀಯ ಪ್ರಕರಣಗಳಿದ್ದು, 470 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ ಸೋಂಕಿನಿಂದ ಇಲ್ಲಿಯವರೆಗೆ 12,941 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನ್​ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದ ವೃದ್ಧನೊಂದಿಗೆ ಅನುಚಿತ ವರ್ತನೆ.. ವಿಡಿಯೋ!

ಬೆಂಗಳೂರಿನಲ್ಲಿ 6,387 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, 40 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಬೀದರ್​ನಲ್ಲಿ 465, ಕಲಬುರ್ಗಿಯಲ್ಲಿ 335, ಮೈಸೂರಿನಲ್ಲಿ 362, ತುಮಕೂರಿನಲ್ಲಿ 239, ಬೆಂಗಳೂರು ಗ್ರಾಮಾಂತರದಲ್ಲಿ 192 ಪ್ರಕರಣ ಕಾಣಿಸಿಕೊಂಡಿವೆ.

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇ 8.24 ರಷ್ಟಿದ್ದು, ಮೃತರ ಪ್ರಮಾಣ ಶೇ. 0.54 ರಷ್ಟಿದೆ.ವಿಮಾನ ನಿಲ್ದಾಣದಿಂದ 3,311 ಪ್ರಯಾಣಿಕರನ್ನ ತಪಾಸಣೆಗೊಳಪಡಿಸಲಾಗಿದ್ದು, ಯುಕೆಯಿಂದ 182 ಪ್ರಯಾಣಿಕರು ಆಗಮಿಸಿದ್ದಾರೆ.

ABOUT THE AUTHOR

...view details