ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ರಾಜ್ಯದಲ್ಲಿ ತೀವ್ರವಾಗಿ ಬೀಸುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ ಕೋವಿಡ್ ಪ್ರಕರಣ ದಾಖಲಾಗಿವೆ.
ಮಹಾರಾಷ್ಟ್ರ ಮೀರಿಸುವತ್ತ ಕರ್ನಾಟಕ, ರಾಜ್ಯದಲ್ಲಿ ಅರ್ಧ ಲಕ್ಷ ಕೋವಿಡ್ ಕೇಸ್, 346 ಬಲಿ
19:40 May 05
ರಾಜ್ಯದಲ್ಲಿಂದು ಅರ್ಧ ಲಕ್ಷ ಜನರಿಗೆ ಕೊರೊನಾ ಸೋಂಕು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಂದೇ ದಿನ 50,112 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 17,41,046ಕ್ಕೇರಿಕೆ ಆಗಿದೆ. ಇದರ ಜತೆಗೆ ಕೋವಿಡ್ನಿಂದಲೇ ಕಳೆದ 24ಗಂಟೆಯಲ್ಲಿ 346 ಸೋಂಕಿತರು ಮೃತಪಟ್ಟಿದ್ದಾರೆ. ಇದೀಗ ರಾಜ್ಯದಲ್ಲಿನ ಸಾವಿನ ಸಂಖ್ಯೆ 16,884ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 26,841 ಮಂದಿ ಗುಣಮುಖರಾಗಿದ್ದು, ಈ ತನಕ 12,36,854 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 4,87,288 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇಕಡಾವಾರು 32.28 ರಷ್ಟಿದ್ದು, ಸಾವಿನ ಶೇಕಡಾವಾರು ಪ್ರಮಾಣ 0.69ರಷ್ಟಿದೆ.
ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ದೃಢ: 3,780 ಮಂದಿ ಸಾವು
ಬೆಂಗಳೂರಿನಲ್ಲಿ ದಾಖಲೆಯ 23,106 ಪ್ರಕರಣ ಕಾಣಿಸಿಕೊಂಡಿದ್ದು, 161 ಮಂದಿ ಕೋವಿಡ್ನಿಂದ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರಿನಲ್ಲಿ 2,790 ಕೇಸ್, ತುಮಕೂರಿನಲ್ಲಿ 2,335 ಪ್ರಕರಣ, ಉಡುಪಿಯಲ್ಲಿ 1,655, ಹಾಸನದಲ್ಲಿ 1,604 ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ನಿನ್ನೆ ಕೂಡ 44,631 ಜನರಿಗೆ ಮಹಾಮಾರಿ ದೃಢಗೊಂಡಿತ್ತು. ಆದರೆ ಇದೇ ಮೊದಲ ಸಲ ರಾಜ್ಯದಲ್ಲಿ 50 ಸಾವಿರ ಗಡಿ ದಾಟಿದೆ.