ಕರ್ನಾಟಕ

karnataka

ETV Bharat / state

ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ )ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ - Law Minister Madhuswamy

ಸರ್ಕಾರದ ಗಮನಕ್ಕೆ ಬರದೆ ಜಿಲ್ಲಾಧಿಕಾರಿಗಳು ನೆಲಸಮ ಮಾಡಲು ಸಾಧ್ಯವೇ?. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಿ. ದೇವಸ್ಥಾನಗಳ ಉಳಿವಿಗೂ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈಸೂರು ಜಿಲ್ಲೆಯ ಹಲವೆಡೆ ಹಾಗೂ ನಂಜನಗೂಡಿನಲ್ಲೂ ಅನೇಕ ದೇವಸ್ಥಾನಗಳನ್ನು ಹಿಂದೆಯೂ ನೆಲಸಮ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು..

Madhuswamy and siddaramiah
ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಸಿದ್ದರಾಮಯ್ಯ

By

Published : Sep 21, 2021, 9:17 PM IST

Updated : Sep 21, 2021, 10:19 PM IST

ಬೆಂಗಳೂರು :ಸಾಕಷ್ಟು ಚರ್ಚೆಯ ನಂತರ 2021ನೇ ಸಾಲಿನ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಕ್ಷೇಪಿಸಿದ ಸದ್ಭಾವನೆ ಪದ ತೆಗೆದು ತಿದ್ದುಪಡಿ ವಿಧೇಯಕ ಅಂಗೀಕರಿಸಲಾಯಿತು.

ದೇವಾಲಯಗಳ ನೆಲಸಮ ವಿಷಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ದಾಳಿ

ಇದಕ್ಕೂ ಮುನ್ನ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಪರ್ಯಾಲೋಚನೆಗೆ ಮಂಡನೆಯಾದ ನಂತರ ದೇವಾಲಯಗಳ ನೆಲಸಮ ವಿಷಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ದಾಳಿ ನಡೆಯಿತು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾ ಸಭಾದವರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದ ಮೇಲೆ ಈ ವಿಧೇಯಕ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ದೇವಾಲಯಗಳ ನೆಲಸಮ ವಿಷಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ದಾಳಿ

ಹಿಂದೂ ದೇವಾಲಯಗಳನ್ನು ನೆಲಸಮ ಮಾಡಬಾರದಿತ್ತು ಎಂದು ನಾನೂ ಹೇಳಿದ್ದೇನೆ. ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಬಾರದು. ನಂಜನಗೂಡಿನಲ್ಲಿ ನೀವೇ ದೇವಸ್ಥಾನ ನೆಲಸಮ ಮಾಡಿ ಈಗ ನೀವೇ ಕಾನೂನು ತರಲು ಹೊರಟಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ ಎಂದಾಗ, ಸಿಟ್ಟಿಗೆದ್ದ ಸಿದ್ದರಾಮಯ್ಯ, ಸರ್ಕಾರಕ್ಕೆ ಈ ವಿಷಯ ಗೊತ್ತಿರಲಿಲ್ಲವೇ?. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವಿಷಯ ತಿಳಿಸಿಲ್ಲ ಎಂದರೆ ಆ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ. ನೀವ್ಯಾಕೆ ಮಂತ್ರಿಗಳಾಗಿದ್ದೀರಿ? ಎಂದು ಮಾಧುಸ್ವಾಮಿ, ಅಶೋಕ್ ಅವರ ವಿರುದ್ಧ ಕಿಡಿಕಾರಿದರು.

ದೇವಾಲಯಗಳ ನೆಲಸಮ ವಿಷಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ದಾಳಿ

ಸಚಿವ ಆರ್. ಅಶೋಕ್ ಮಾತನಾಡಿ, ಹಿಂದಿನ ಸರ್ಕಾರಗಳೂ ದೇವಾಲಯ ನೆಲಸಮ ಮಾಡಿವೆ. ನಾವೊಬ್ಬರೆ ಮಾಡಿಲ್ಲ. ಈಗ ಜಿಲ್ಲಾಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡಿದ್ದಾರೆ ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಓವರ್ ಆ್ಯಕ್ಟಿಂಗ್ ಅಂದ್ರೇನು?. ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಧಾರ್ಮಿಕ ಕಟ್ಟಡಗಳ ತೆರವು, ಮಹಾತ್ಮರ ಪ್ರತಿಮೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಜೆಡಿಎಸ್‍ನ ಬಂಡೆಪ್ಪ ಕಾಶಂಪುರ್, ದೇವಸ್ಥಾನಗಳ ಪುನರ್ ನಿರ್ಮಾಣ ಮಾಡಬೇಕು ಎಂದು ಆವೇಶಭರಿತವಾಗಿ ಆಗ್ರಹಿಸಿದರು.

ದೇವಾಲಯಗಳ ನೆಲಸಮ ವಿಷಯ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ದಾಳಿ

ಸರ್ಕಾರದ ಗಮನಕ್ಕೆ ಬರದೆ ಜಿಲ್ಲಾಧಿಕಾರಿಗಳು ನೆಲಸಮ ಮಾಡಲು ಸಾಧ್ಯವೇ?. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದೀರಿ. ದೇವಸ್ಥಾನಗಳ ಉಳಿವಿಗೂ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮೈಸೂರು ಜಿಲ್ಲೆಯ ಹಲವೆಡೆ ಹಾಗೂ ನಂಜನಗೂಡಿನಲ್ಲೂ ಅನೇಕ ದೇವಸ್ಥಾನಗಳನ್ನು ಹಿಂದೆಯೂ ನೆಲಸಮ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ನಂತರ ಸಿದ್ದರಾಮಯ್ಯ ಮಾತನಾಡಿ, ಸದ್ಭಾವನೆಯಿಂದ ನೆಲಸಮ ಮಾಡಿದರೆ ಎಂಬ ಪದ ವಿಧೇಯಕದಲ್ಲಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಮಾಧುಸ್ವಾಮಿ, ನ್ಯಾಯಾಲಯಗಳ ಆದೇಶ ಪಾಲನೆ ಎಂದು ಇದರರ್ಥವಷ್ಟೇ ಎಂದು ಸಮಜಾಯಿಷಿ ನೀಡಿದರು.

ಓದಿ:ಸಿಆರ್‌ಎಫ್ ಅನುದಾನ ವಿಚಾರ ; ಕಲಾಪದಲ್ಲಿ ಸಚಿವ ಮಾಧುಸ್ವಾಮಿ, ಶಾಸಕ ಹೆಚ್ ಡಿ ರೇವಣ್ಣ ಮಾತಿನ ಸಮರ

Last Updated : Sep 21, 2021, 10:19 PM IST

ABOUT THE AUTHOR

...view details