ಬೆಂಗಳೂರು :76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೇಂದ್ರ ಗೃಹ ಸಚಿವಾಲಯ ನೀಡುವ 'ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ' ಗೌರವಕ್ಕೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಪಾತ್ರರಾಗಿದ್ದಾರೆ. 18 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಸೇವಾ ಪದಕದೊಂದಿಗೆ ಗೌರವಿಸಲಾಗುತ್ತದೆ. ಅಧಿಕಾರಿಗಳ ವಿವರ ಹೀಗಿದೆ.
- ಸೀಮಂತ್ ಕುಮಾರ್ ಸಿಂಗ್, ಕೆಎಸ್ಆರ್ಪಿ ಎಡಿಜಿಪಿ, ಬೆಂಗಳೂರು - ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ
- ಎಸ್.ಮುರುಗನ್, ಎಡಿಜಿಪಿ, ಪೊಲೀಸ್ ಸಂಪರ್ಕ, ಸಂವಹನ & ಆಧುನೀಕರಣ, ಬೆಂಗಳೂರು - ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ
- ಸಂದೀಪ್ ಪಾಟೀಲ್, ಐಜಿಪಿ, ಕೆಎಸ್ಆರ್ಪಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಬಿ.ಎಸ್.ಮೋಹನ್ ಕುಮಾರ್, ಡಿವೈಎಸ್ಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಜಿ.ನಾಗರಾಜ್, ಎಸಿಪಿ, ವಿ.ವಿ.ಪುರಂ ಉಪ ವಿಭಾಗ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಶಿವಶಂಕರ್, ಸಹಾಯಕ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಬಿ.ಗಿರೀಶ್, ಡಿವೈಎಸ್ಪಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಜಗದೀಶ್ ಹೆಚ್.ಎಸ್, ಎಸಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಜಿ.ಕೇಶವಮೂರ್ತಿ, ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಎಂ.ಎನ್.ನಾಗರಾಜು , ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಬಿ.ಎನ್.ಶ್ರೀನಿವಾಸ್, ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಅಂಜುಮಾಲ ಟಿ.ನಾಯ್ಕ್ , ಡಿವೈಎಸ್ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ರಾಘವೇಂದ್ರ ಹೆಗಡೆ- ಎಸ್.ಪಿ, ಸಿಐಡಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಅನಿಲ್ ಕುಮಾರ್ ಪಿ. ಗ್ರಾಂಪುರೋಹಿತ್, ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಅಶೋಕ್ ಆರ್.ಪಿ, ಪೊಲೀಸ್ ಇನ್ಸ್‌ಪೆಕ್ಟರ್, ಸದಾಶಿವ ನಗರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ರಾಮಪ್ಪ ಬಿ.ಗುತ್ತೇರ್, ಪೊಲೀಸ್ ಇನ್ಸ್‌ಪೆಕ್ಟರ್, ತಾವರೆಕೆರೆ ಪೊಲೀಸ್ ಠಾಣೆ, ರಾಮನಗರ - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಶಂಕರ, ಹೆಡ್‌ಕಾನ್ಸ್‌ಟೇಬಲ್, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್, ಉಡುಪಿ - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ವೆಂಕಟೇಶ್.ಕೆ, ಹೆಡ್ ಕಾನ್ಸ್‌ಟೇಬಲ್, ಡಿಪಿಒ ರಾಯಚೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ
- ಕುಮಾರ್.ಎಸ್, ಹೆಡ್‌ಕಾನ್ಸ್‌ಟೇಬಲ್, ರಾಜ್ಯ ಅಪರಾಧ ದಾಖಲೆಗಳ ವಿಭಾಗ, ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ ವಿ.ಬಂಗಾರು.
- ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಕೆಎಸ್ಆರ್ಪಿ ಬೆಂಗಳೂರು - ಪೊಲೀಸ್ ಶ್ಲಾಘನೀಯ ಸೇವಾ ಪದಕ