ಕರ್ನಾಟಕ

karnataka

ETV Bharat / state

ದೇಶಕ್ಕೆ ಮಾದರಿ ಕರ್ನಾಟಕದ ನಡೆ: ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಆರೋಗ್ಯ ವಿಮೆ

ನಮ್ಮಲ್ಲಿರುವ ಯಾವುದೇ ಯೋಜನೆಗಳ ಜೊತೆಗೆ ಲ್ಯಾಬ್‌ಗಳಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಅಧಿಕಾರಿಗಳಿಗೆ ಮತ್ತು ಕೋವಿಡ್​-19 ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚುವರಿ ಆರೋಗ್ಯ ವಿಮೆಯನ್ನು ಒದಗಿಸುವ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ- ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್

treating Covid-19 patients
ಕೊರೊನಾ ಚಿಕಿತ್ಸೆ

By

Published : Mar 10, 2020, 8:49 PM IST

ಬೆಂಗಳೂರು: ಕೋವಿಡ್​-19 ಪ್ರಕರಣಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆವೈದ್ಯರಿಗೆ ಹೆಚ್ಚುವರಿ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್​ಐ) ಕೊರೊನಾ ವೈರಸ್​, ಎಚ್1ಎನ್ 1 ಸೇರಿದಂತೆ ಇತರ ರೋಗಗಳ ಪರೀಕ್ಷಾ ಪ್ರಯೋಗಾಲಯ ಕೇಂದ್ರ ಉದ್ಘಾಟಿಸಿ ಸಚಿವ ಸುಧಾಕರ್​ ಮಾತನಾಡಿದರು.

'ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಲ್ಲದೆ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವವರಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವೈದ್ಯರ ಸುರಕ್ಷತೆಯೂ ನಮಗೆ ಮುಖ್ಯ' ಎಂದು ಹೇಳಿದರು.

ಈ ವಿಷಯ ಚರ್ಚೆಯ ಹಂತದಲ್ಲಿದ್ದು, ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬರಲಿದೆ. ವೈದ್ಯರು, ಅರೆವೈದ್ಯರು ಮತ್ತು ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವವರಿಗೆ ಇದು ಹೆಚ್ಚು ಅಗತ್ಯವಾಗಿದೆ. ನೀವು ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ವೃತ್ತಿಪರ ನಿರ್ಲಕ್ಷ್ಯಕ್ಕೆ ಯಾವುದೇ ಅವಕಾಶ ಇರಬಾರದು ಎಂದರು.

ABOUT THE AUTHOR

...view details