ಬೆಂಗಳೂರು: ಗಡಿ ವಿಚಾರವಾಗಿ ಸೋಮವಾರ ರಾಜ್ಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದು, ನಾನೂ ಭೇಟಿಯಾಗಲಿದ್ದೇನೆ. ಈಗಾಗಲೇ ಅಮಿತ್ ಶಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು. ಮಹಾರಾಷ್ಟ್ರ ಗಡಿ ಕ್ಯಾತೆ ಸಂಬಂಧ ಸೋಮವಾರ ರಾಜ್ಯದ ಎಂಪಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ನೀಡಿ ವಸ್ತುಸ್ಥಿತಿ ತಿಳಿಸಲಿದ್ದಾರೆ. ಬಳಿಕ ಖುದ್ದಾಗಿ ಅಮಿತ್ ಶಾ ಅವರನ್ನ ನಾನು ಭೇಟಿ ಮಾಡಲಿದ್ದೇನೆ. ಬಹುತೇಕ ಡಿಸೆಂಬರ್ 14 ಅಥವಾ 15 ರಂದು ಅಮಿತ್ ಶಾ ಜೊತೆ ಮಹಾರಾಷ್ಟ್ರ ಸಿಎಂ ಸಭೆ ನಡೆಯಲಿದೆ. ಅದಕ್ಕೆ ನನ್ನನ್ನೂ ಕರೆದಿದ್ದಾರೆ. ಮಹಾರಾಷ್ಟ್ರ ನಿಯೋಗ ಗೃಹ ಸಚಿವರ ಭೇಟಿ ಮಾಡಿದೆ. ನಾನು ಕೂಡ ಅಮಿತ್ ಶಾ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದರು.
ನಮ್ಮನ್ನು ಕೂಡ ಸಭೆಗೆ ಅಮಿತ್ ಶಾ ಕರೆದಿದ್ದಾರೆ. ನಾನು ಮಹಾರಾಷ್ಟ್ರ ಸಿಎಂ ಸಭೆಯಲ್ಲಿ ಭಾಗಿಯಾಗುತ್ತೇವೆ. ಸಭೆಯಲ್ಲಿ ಅಮಿತ್ ಶಾ ಜೊತೆ ವಿವರವಾಗಿ ಮಾತನಾಡುತ್ತೇನೆ. ಈಗಾಗಲೇ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ದೆಹಲಿ ಭೇಟಿಗೂ ಮುನ್ನ ಸರ್ವಪಕ್ಷ ನಾಯಕರ ಜೊತೆ ಮತ್ತೆ ಮಾತನಾಡುತ್ತೇನೆ ಎಂದು ತಿಳಿಸಿದರು.