ಬೆಂಗಳೂರು: ಕೋವಿಡ್ ಸೋಂಕು ನಿಯಂತ್ರಣಕ್ಕೆರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ 35 ದಿನಗಳ ಬಳಿಕ ನಾಳೆ ಅಂತ್ಯವಾಗಲಿದೆ. ಸರ್ಕಾರದ ಅಧಿಕೃತ ದತ್ತಾಂಶಗಳ ಪ್ರಕಾರ, ಲಾಕ್ ಡೌನ್ ಘೋಷಣೆಯಾದ ಬಳಿಕ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೇ 10 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 40 ಸಾವಿರದಷ್ಟು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿತ್ತು. (ಮೇ 10 ರಂದು 39,305 ಪ್ರಕರಣ ದಾಖಲಾಗಿವೆ) ಪಾಸಿಟಿವಿಟಿ ದರ ಶೇ. 31.66 ರಷ್ಟು ಮತ್ತು ಸಾವಿನ ಪ್ರಮಾಣ ಶೇ. 1.51 ಇತ್ತು. (ಮೇ 10 ರಂದು 596 ಮಂದಿ ಮೃತಪಟ್ಟಿದ್ದಾರೆ)