ಕರ್ನಾಟಕ

karnataka

ETV Bharat / state

ನಾಳೆಯಿಂದ ವಿಧಾನಮಂಡಲ ಅಧಿವೇಶನ: ಸರ್ಕಾರ-ವಿಪಕ್ಷಗಳ ಮಧ್ಯೆ ಜಂಗೀಕುಸ್ತಿಗೆ ವೇದಿಕೆ ಸಿದ್ಧ!

ಅಧಿವೇಶನದಲ್ಲಿ ವಿಪಕ್ಷಗಳು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗಿಂತ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮಹತ್ವದ ವಿಚಾರಗಳ ಕುರಿತು ಸದನದಲ್ಲಿ ಪ್ರಸ್ತಾಪಿಸುವ ಪ್ಲಾನ್​ ಮಾಡಿಕೊಂಡಿವೆ.

Karnataka Legislative session to begin tomorrow
ನಾಳೆಯಿಂದ ವಿಧಾನಮಂಡಲ ಅಧಿವೇಶನ

By

Published : Feb 16, 2020, 8:14 PM IST

ಬೆಂಗಳೂರು: ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಹಾಗೂ ಪ್ರತಿಪಕ್ಷಗಳ ಮಧ್ಯೆ ಜಂಗೀಕುಸ್ತಿ ಶುರುವಾಗಲಿದೆ.

ವಿರೋಧ ಪಕ್ಷಕ್ಕೆ ಆಹಾರವಾಗದಂತೆ ಆಡಳಿತರೂಢ ಬಿಜೆಪಿ ಪ್ಲಾನ್ ರೂಪಿಸಿಕೊಂಡಿದೆ. ಇನ್ನೊಂದೆಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧವಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಲೋಕಾಯುಕ್ತ ತಿದ್ದುಪಡಿ ಬಿಲ್ ಸೇರಿದಂತೆ ಪ್ರಮುಖ ಆರು ಬಿಲ್​ಗಳು ಮಂಡನೆಯಾಗಲಿದೆ.

ನಾಳೆಯಿಂದ ಫೆಬ್ರವರಿ 20 ರವರೆಗೆ ನಾಲ್ಕು ದಿನಗಳ ಕಾಲ ಜಂಟಿ ಅಧಿವೇಶನ ನಡೆಯಲಿದೆ. ಜಂಟಿ ಅಧಿವೇಶನದ ಮೊದಲ ದಿನ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಬಾಯ್ ವಾಲಾ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನು ಜಂಟಿ‌ ಅಧಿವೇಶನದ ಎರಡು ಮತ್ತು ಮೂರನೇ ದಿನ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಮೀತವಾಗಿರಲಿದೆ.

ವಿಪಕ್ಷಗಳು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗಿಂತ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮಹತ್ವದ ವಿಚಾರಗಳ ಕುರಿತು ಸದನದಲ್ಲಿ ಪ್ರಸ್ತಾಪಿಸುವ ಪ್ಲಾನ್​ ಮಾಡಿಕೊಂಡಿವೆ. ಸಿಎಎ ಹೋರಾಟ, ಮಂಗಳೂರು ಗಲಭೆ ಪ್ರಕರಣ, ಸಚಿವ ಆನಂದ್​ ಸಿಂಗ್ ಪ್ರಕರಣ, ನೆರೆ ಪರಿಹಾರ, ಲೋಕಾಯುಕ್ತ ತಿದ್ದುಪಡಿ ಬಿಲ್ ವಿಚಾರ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಲಿವೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದ್ರೂ ಕೂಡ ವಿಪಕ್ಷಗಳು ಅನ್ಯ ವಿಚಾರಗಳ ಬಗ್ಗೆ ಗದ್ದಲವೇನಾದ್ರು ನಡೆಸಿದ್ರೆ, ವಂದನಾ ನಿರ್ಣಯಗೊಳಿಸಿ ಬಜೆಟ್ ಅಧಿವೇಶನಕ್ಕೆ ತೆರಳುವ ಪ್ಲಾನ್​ನ್ನು ಸರ್ಕಾರ ಮಾಡಿಕೊಂಡಿದೆ.

ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ 6 ಮಸೂದೆ ಮಂಡನೆಯಾಗಲಿದೆ. ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ಮಸೂದೆ, ಕರ್ನಾಟಕ ನಾವಿನ್ಯತೆ ಪ್ರಾಧಿಕಾರ ಮಸೂದೆ, ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ ತಿದ್ದುಪಡಿ ಮಸೂದೆ, ಕರ್ನಾಟಕ ರಾಜಭಾಷಾ ತಿದ್ದುಪಡಿ ಮಸೂದೆ, ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ಮಸೂದೆ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತಿದ್ದುಪಡಿ ಮಸೂದೆ ಬಿಲ್​ಗಳು ಮಂಡನೆಯಾಗಲಿವೆ.

ABOUT THE AUTHOR

...view details