ಕರ್ನಾಟಕ

karnataka

ETV Bharat / state

ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ - ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ

ಕರ್ನಾಟಕ ಲಲಿತ ಕಲಾ ಅಕಾಡೆಮಿಯ 2020ನೇ ಗೌರವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

Karnataka Lalithakala Academy awards Announced
ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ

By

Published : Apr 5, 2021, 6:54 PM IST

ಬೆಂಗಳೂರು : ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿರುವ ಒಬ್ಬ ಮಹಿಳಾ ಕಲಾವಿದೆ ಸೇರಿದಂತೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ 2020 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಮೂವರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿ ಮೊತ್ತ 50 ಸಾವಿರ ನಗದು ಇರಲಿದೆ.

ಗೌರವ ಪ್ರಶಸ್ತಿಗೆ ಮಂಗಳೂರಿನ ಗಣೇಶ್ ಸೋಮಯಾಜಿ, ಬೆಂಗಳೂರಿನ ಮೀರಾ ಕುಮಾರ್ ಹಾಗೂ ಧಾರವಾಡದ ಬಿ.ಮಾರುತಿ ಅವರ ಹೆಸರು ಘೋಷಿಸಲಾಗಿದೆ. 49 ನೇ ವಾರ್ಷಿಕ ಕಲಾ ಬಹುಮಾನಕ್ಕೆ 89 ಕಲಾಕೃತಿಗಳನ್ನು ಆಯ್ಕೆಮಾಡಿ, ಅದರಲ್ಲಿ ಉತ್ತಮ 10 ಕಲಾಕೃತಿಗಳಿಗೆ ತಲಾ ರೂ. 25 ಸಾವಿರದಂತೆ ಹತ್ತು ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಓದಿ : ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಪವರ್ ಸ್ಟಾರ್ ಮತ್ತು ಜಗ್ಗೇಶ್..

ಈ ಬಹುಮಾನಕ್ಕೆ ಭರತ್ ಕಂದಕೂರ, ಚಂದ್ರಶೇಖರ್ ಜಿ.ಪಾಟೀಲ್, ಮೈನು ವೈ, ಉಮೇಶ್ ವಿ.ಎಂ, ಮಂಜುನಾಥ್ ಬಿ, ಅಲ್ಕಾ ಚಂದ್ವಾನಿ, ಕಿರಣ್ ಶೇರ್ ಖಾನೆ, ರೇಣುಕಾ ಕೇಸರಮಡು, ಸಂತೋಷ್ ರಾಥೋಡ್, ದಸ್ತಗಿರಿ ಮಸ್ತಾನ್ ಸಾಬ್ ಅವರನ್ನು ಆಯ್ಕೆ ಮಾಡಲಾಗಿದೆ.

ABOUT THE AUTHOR

...view details