ಕರ್ನಾಟಕ

karnataka

ETV Bharat / state

ಕನ್ನಡಿಗರಿಗೆ ಅವಕಾಶಗಳ ಕೊರತೆ ಹೆಚ್ಚಾಗಿದೆ: ದುನಿಯಾ ವಿಜಯ್​ - ದುನಿಯಾ ವಿಜಯ್

ಕರ್ನಾಟಕದಲ್ಲಿ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಿರಬೇಕೆಂಬ ಹೋರಾಟಕ್ಕೆ ನಟ ದುನಿಯಾ ವಿಜಯ್​ ಬೆಂಬಲ ಸೂಚಿಸಿದ್ದಾರೆ.

ದುನಿಯಾ ವಿಜಯ್

By

Published : Aug 15, 2019, 8:07 AM IST

ಬೆಂಗಳೂರು:ಕರ್ನಾಟಕದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕೆಂದು ಅಗ್ರಹಿಸಿ‌ ಕನ್ನಡಪರ ಸಂಘಟನೆಗಳು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿವೆ.

ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲು ದುನಿಯಾ ವಿಜಯ್ ಆಗ್ರಹ ​

ಈ ಹೋರಾಟಕ್ಕೆ ಹಲವಾರು ಸಂಘಟನೆಗಳು ಹಾಗೂ ಕನ್ನಡ ಚಿತ್ರೋದ್ಯಮ ಬೆಂಬಲ ‌ಸೂಚಿಸಿವೆ. ನಟ ದುನಿಯಾ ವಿಜಯ್ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೇ ಮೊದಲು ಉದ್ಯೋಗ ಸಿಗಬೇಕು. ಕನ್ನಡಿಗರಿಗೆ ದುಡಿಯುವ ಹಂಬಲ ಇದೆ. ಆದ್ರೆ, ಅವಕಾಶಗಳ ಕೊರತೆ ಹೆಚ್ಚಾಗಿದೆ. ಖಾಸಗಿ ವಲಯಗಳಲ್ಲಿ ಹೊರ ರಾಜ್ಯದವರ ಹಾವಳಿ ಹೆಚ್ಚಾಗಿದ್ದು, ಕನ್ನಡಿಗರಿಗೆ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ವಿಜಯ್​ ಆರೋಪಿಸಿದರು.

ಅಲ್ಲದೆ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದು, ಅವರಿಗೂ ಉದ್ಯೋಗದ ಕೊರತೆ ಕಾಡುತ್ತಿದೆ. ಅಲ್ಲದೆ ನಮ್ಮ ರಾಜ್ಯದಲ್ಲಿ ನಮ್ಮವರಿಗೇ ಉದ್ಯೋಗ ಕೊಡುವುದರಿಂದ ಶೇ.70 ರಷ್ಟು ಬಡತನ ನಿರ್ಮೂಲನೆಗೆ ಸಹಾಯವಾಗುತ್ತದೆ ಎಂದು ದುನಿಯಾ ವಿಜಯ್​ ಅಭಿಪ್ರಾಯಪಟ್ಟರು.

ABOUT THE AUTHOR

...view details