ಕರ್ನಾಟಕ

karnataka

ETV Bharat / state

'ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ.1 ರಾಜ್ಯ' - Bangalore

ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ ಲಸಿಕಾ ನೀಡುವ ಅಭಿಯಾನ ಇನ್ನಷ್ಟು ವೇಗವಾಗಿ ಮುನ್ನಡೆಯಲಿದೆ ಎಂದು ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Bangalore
ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ.1 ರಾಜ್ಯ

By

Published : May 31, 2021, 7:05 AM IST

ಬೆಂಗಳೂರು:ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ.1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕಾಗಿದ್ದು, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ನಿನ್ನೆ 80,000 ಡೋಸ್ ಕೋವ್ಯಾಕ್ಸಿನ್ ಹಾಗೂ 2,17,310 ಡೋಸ್ ಕೋವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದಗಳು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ರಾಜ್ಯ ಲಸಿಕಾ ಅಭಿಯಾನದ ಅಂಕಿ-ಸಂಖ್ಯೆ:

ಸಚಿವ ಸುಧಾಕರ್ ಹೇಳಿಕೆ ಬೆನ್ನಲ್ಲೆ ಕರ್ನಾಟಕ ರಾಜ್ಯದ ವ್ಯಾಕ್ಸಿನೇಷನ್ ಡ್ರೈವ್‌ನ ಇತ್ತೀಚಿನ ಮಾಹಿತಿ ಗಮನಿಸಿದರೆ, ರಾಜ್ಯದಲ್ಲಿ ಇಲ್ಲಿಯವರೆಗೆ 7,17,640 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

2ನೇ ಡೋಸ್ 4,70,979 ಜನ ಆರೋಗ್ಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ. ಫ್ರಂಟ್‌ಲೈನ್ ವಾರಿಯರ್ಸ್​ಗೆ ಕ್ರಮವಾಗಿ ಮೊದಲ ಮತ್ತು 2ನೇ ಡೋಸ್ 6,06,954 ಮತ್ತು 2,10,327 ಮಂದಿಗೆ ನೀಡಲಾಗಿದೆ.

ರಾಜ್ಯದಲ್ಲಿ 18 ರಿಂದ 44 ವಯೋಮಾನದ 9,30,855 ಜನಕ್ಕೆ ಮೊದಲ ಡೋಸ್ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕ್ರಮವಾಗಿ 84,14,335 ಮತ್ತು 20,45,078 ಮಂದಿಗೆ ಮೊದಲ ಮತ್ತು 2ನೇ ಡೋಸ್ ಲಸಿಕೆ ನೀಡಲಾಗಿದೆ.

ರಾಜ್ಯ ಲಸಿಕಾ ಅಭಿಯಾನದ ಅಂಕಿ-ಅಂಶಗಳ ವರದಿ

ಒಟ್ಟು 1,06,69,784 ಮೊದಲ ಮತ್ತು 27,26,385 ಜನಕ್ಕೆ 2ನೇ ಡೋಸ್ ನೀಡಲಾಗಿದೆ ಎಂದು ಸರ್ಕಾರಿ ಕೋವಿನ್ ಪೋರ್ಟಲ್ ಮಾಹಿತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಈವರೆಗೆ 1,33,96,169 ಲಸಿಕೆಯನ್ನು ರಾಜ್ಯ ಸರ್ಕಾರ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಕರ್ನಾಟಕದ ನರ್ಸಿಂಗ್ ಸಿಬ್ಬಂದಿಗೆ ಎಲ್ಲಿಲ್ಲದ ಬೇಡಿಕೆ : ಬ್ರಿಟನ್ ಆರೋಗ್ಯ ಇಲಾಖೆಗೂ ಬೇಕಂತೆ ನಮ್ಮ ನರ್ಸ್​ಗಳು

ABOUT THE AUTHOR

...view details