ಬೆಂಗಳೂರು: ಆನ್ಲೈನ್ ಗೇಮ್ಗಳ ಸ್ವರೂಪದ ಕುರಿತಂತೆ ವಿಷಯ ತಜ್ಞರು ನಿರ್ಧರಿಸಬೇಕೇ ಹೊರತು ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿಯಲ್ಲ (ಜಿಎಸ್ಟಿ) ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆನ್ಲೈನ್ ಗೇಮಿಂಗ್ಗಳಿಗೆ 21 ಸಾವಿರ ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ (ಜಿಎಸ್ಟಿ) ಗುಪ್ತಚರ ನಿರ್ದೇಶನಾಲಯದ ಕ್ರಮವನ್ನು ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಆನ್ಲೈನ್ ಗೇಮಿಂಗ್ ಅವಕಾಶದ ಆಟ ಎಂಬುದಾಗಿ ಪರಿಗಣಿಸಲಾಗಿದೆಯೇ ಎಂದು ಪ್ರಶ್ನಿಸಿತು.
ತೆರಿಗೆ ಅಧಿಕಾರಿಗಳು ಗೇಮಿಂಗ್ ಕುರಿತಂತೆ ಏನು ಗೊತ್ತು. ಗೇಮ್ಗಳ ಸ್ವರೂಪವನ್ನು ಅಧಿಕಾರಿಗಳು ಹೇಗೆ ನಿರ್ಧರಿಸಲು ಸಾಧ್ಯ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಾಹಿತಿ ಇದಿಯೇ. ಇದನ್ನು ಪರಿಣಿತರ ನಿರ್ಧರಿಸಬೇಕಲ್ಲವೇ ಎಂದು ಪ್ರಶ್ನಿಸಿತು. ಈ ವೇಳೆ ತೆರಿಗೆ ಇಲಾಖೆಯ ಪರವಾಗಿ ಹಾಜರಾಗಿದ್ದ ಡೆಪ್ಯೂಟಿ ಸಾಲಿಸೇಟರ್ ಜನರಲ್ ಎನ್. ವೆಂಕಟರಾಮನ್, ತೆರಿಗೆ ವಿಧಿಸುವುದಕ್ಕಾಗಿ ಜಾರಿ ಮಾಡಿರುವ ನೋಟಿಸ್ನಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ ಎಂದು ವಿವರಿಸಿದರು.