ಬೆಂಗಳೂರು: ಪ್ರಸಿದ್ಧ ಉದ್ಯಮಿ ಆದಿಕೇಶವುಲು ಆಪ್ತ ರಘುನಾಥ್ ಅನುಮಾನಾಸ್ಪಾದ ಸಾವು ಪ್ರಕರಣದ ಬಗ್ಗೆ ಸಿಬಿಐ ತನಿಖೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೃತರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ಈ ಆದೇಶ ನೀಡಿದೆ. ಮುಂದಿನ 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
ಉದ್ಯಮಿ ಆದಿಕೇಶವುಲು ಆಪ್ತ ರಘುನಾಥ್ ಅನುಮಾನಾಸ್ಪಾದ ಸಾವು: ಮೃತರ ಕುಟುಂಬಸ್ಥರು ನ್ಯಾಯ ಸಮ್ಮತ ತನಿಖೆ ಬಯಸುತ್ತಾರೆ. ಆದರೆ ಆರೋಪಿ ಪ್ರಭಾವಿಯಾಗಿದ್ದಾರೆ. ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪವಿದೆ. ಬಿ ರಿಪೋರ್ಟ್ ಸಲ್ಲಿಸಿರುವುದರಿಂದ ಮತ್ತೆ ಎಸ್ಐಟಿ ತನಿಖೆ ಬೇಕಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸುವುತ್ತಿರುವುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದಿಕೇಶವುಲು 2013 ಏ.24 ರಂದು ಮೃತಪಟ್ಟಿದ್ದರು. ಅವರ ಆಪ್ತರಾಗಿದ್ದ ರಘುನಾಥ್ ಹೆಸರಿನಲ್ಲಿ ಆಸ್ತಿ ಮಾಡಲಾಗಿತ್ತು ಎಂಬ ಗುಮಾನಿಯಿತ್ತು. ಈ ನಡುವೆ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಅವರಿಂದ ಆಸ್ತಿ ವರ್ಗಾಯಿಸಲು ರಘುನಾಥ್ ಮೇಲೆ ಒತ್ತಡ ಮಾಡಿದ ಆರೋಪವಿತ್ತು.