ಬೆಂಗಳೂರು:ಚೀನಾ ಮೂಲದ ಶಿಯೋಮಿ ಸಂಸ್ಥೆಯ ಬ್ಯಾಂಕ್ ಖಾತೆಗಳಲ್ಲಿದ್ದ 5,551 ಕೋಟಿ ರೂ. ಜಪ್ತಿಗೆ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಊರ್ಜಿತಗೊಳಿಸಿ ಸಕ್ಷಮ ಪ್ರಾಧಿಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಮಾಡಿದೆ
ಫೆಮಾ ಅಡಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಊರ್ಜಿತಗೊಳಿಸಿ ಸಕ್ಷಮ ಪ್ರಾಧಿಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ರಜಾಕಾಲದ ಪೀಠ ಕೇಂದ್ರ ಹಣಕಾಸು ಸಚಿವಾಲಯ, ಇಡಿ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೇ, ಮಧ್ಯಂತರ ಪರಿಹಾರವಾಗಿ ಸಕ್ಷಮ ಪ್ರಾಧಿಕಾರದ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡುವಂತೆ ಅರ್ಜಿದಾರ ಸಂಸ್ಥೆಯ ಪರ ವಕೀಲರ ಮನವಿ ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿದೆ. ಶಿಯೋಮಿ ಸಂಸ್ಥೆಗೆ ಸೇರಿದ 5,551.27 ಕೋಟಿ ರೂ. ಜಪ್ತಿಗೆ ಕಳೆದ ಏ.29ರಂದು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿಯನ್ನು ಜುಲೈ ತಿಂಗಳಿನಲ್ಲಿ ಇತ್ಯರ್ಥಪಡಿಸಿದ್ದ ಹೈಕೋರ್ಟ್ ಏಕಸದಸ್ಯಪೀಠ, ಶಿಯೋಮಿ ಅರ್ಜಿ ಸಲ್ಲಿಸಿರುವುದು ತರಾತುರಿಯ ಕ್ರಮವಾಗಿದೆ. ಅರ್ಜಿದಾರ ಕಂಪನಿಯ ಬ್ಯಾಂಕ್ ಖಾತೆ ಜಪ್ತಿಗೆ ಆದೇಶ ಹೊರಡಿಸಿರುವ ಅಧಿಕಾರಿ 20 ದಿನಗಳ ಒಳಗೆ ಆ ಆದೇಶವನ್ನು ಫೆಮಾ ಸೆಕ್ಷನ್ 37ಎ (2) ಅಡಿಯಲ್ಲಿ ಹಣಕಾಸು ಸಚಿವಾಲಯದಿಂದ ನೇಮಕಗೊಂಡ ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಸಕ್ಷಮ ಪ್ರಾಧಿಕಾರ ಎಲ್ಲ ಬಾಧಿತರಿಗೆ ಅವಕಾಶ ನೀಡಿ, 60 ದಿನಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.
ಇಡಿ ಆದೇಶ ಊರ್ಜಿತ: ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಜಪ್ತಿಯಾದ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕೇವಲ ದೈನಂದಿನ ಚಟುವಟಿಕೆಗೆ ಬಳಕೆ ಮಾಡಲು ಶಿಯೋಮಿ ಸಂಸ್ಥೆಗೆ ಅವಕಾಶ ನೀಡಿ ಮೇ 5ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಕರಣದ ಕುರಿತು ಸಕ್ಷಮ ಪ್ರಾಧಿಕಾರ ಆದೇಶ ಹೊರಡಿಸುವವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಇದೀಗ, ಇಡಿ ಹೊರಡಿಸಿದ್ದ ಆದೇಶವನ್ನು ಸಕ್ಷಮ ಪ್ರಾಧಿಕಾರ ಊರ್ಜಿತಗೊಳಿಸಿರುವ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಮುಂದುವರೆಯಲಿದೆ.
ಪ್ರಕರಣದ ಹಿನ್ನೆಲೆ ಏನು?:ಚೀನಾ ಮೂಲದ ಶಓಮಿ ಬಳಗದ ಅಧೀನ ಕಂಪನಿಯಾಗಿರುವ ಶಓಮಿ ಟೆಕ್ನಾಲಜಿ ಇಂಡಿಯಾಗೆ ಸೇರಿದ 5,551.27 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲು ಏ.29ರಂದು ಇಡಿ ಆದೇಶ ಹೊರಡಿಸಿತ್ತು. ರಾಯಧನದ ಸೋಗಿನಲ್ಲಿ ಒಂದು ಶಓಮಿ ಗ್ರೂಪ್ ಘಟಕ ಸೇರಿ ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ಹಣವನ್ನು ಅಕ್ರಮವಾಗಿ ರವಾನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಜತೆಗೆ, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಕ್ರಮವಾಗಿ ಹಣ ಪಾವತಿಸಲಾಗಿದೆ ಎಂಬ ಆರೋಪ ಕುರಿತು ತನಿಖೆಯನ್ನೂ ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ಶಿಓಮಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನು ಓದಿ:ನಿಶ್ಚಿತಾರ್ಥ ಸಂಬಂಧ ಬೆಳೆಸಲು ಲೈಸೆನ್ಸ್ ಅಲ್ಲ.. ನವವಧು ಜತೆ ಲೈಂಗಿಕತೆ ಅತ್ಯಾಚಾರವಾಗುತ್ತೆ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು