ಕರ್ನಾಟಕ

karnataka

ETV Bharat / state

ಗಣೇಶೋತ್ಸವ ಆಚರಣೆ: ರಾಜ್ಯ ಸರ್ಕಾರದಿಂದ ಇಂದು ಹೊರಬೀಳಲಿದೆ ಮಹತ್ವದ ನಿರ್ಧಾರ

ರಾಜ್ಯದಲ್ಲಿ ಆಚರಣೆ ಮಾಡಲಾಗುವ ಗೌರಿ-ಗಣೇಶನ ಹಬ್ಬಕ್ಕೆ ರಾಜ್ಯ ಸರ್ಕಾರ ಇಂದು ಮಹತ್ವದ ಮಾರ್ಗಸೂಚಿ(ನಿರ್ಧಾರ) ಹೊರಡಿಸಲಿದೆ.

Ganesh Festival
Ganesh Festival

By

Published : Sep 5, 2021, 5:43 AM IST

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ನ 3ನೇ ಅಲೆ ಭೀತಿ ಮಧ್ಯೆ ಗೌರಿ-ಗಣೇಶ ಹಬ್ಬ ಬಂದಿದ್ದು, ಈ ಹಬ್ಬವನ್ನ ರಾಜ್ಯದ ಜನರು ಯಾವ ರೀತಿಯಾಗಿ ಆಚರಣೆ ಮಾಡಬೇಕು ಎಂಬುದರ ಕುರಿತು ಇಂದು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಹೊರಬೀಳಲಿದೆ.

ಈಗಾಗಲೇ ಗಣೇಶೋತ್ಸವ ಆಚರಣೆಗೆ ಬಿಜೆಪಿ ಮುಖಂಡರೇ ಒತ್ತಾಯಿಸಿದ್ದಾರೆ. ಹೀಗಾಗಿ, ಕೆಲ ನಿರ್ಬಂಧ ವಿಧಿಸಿ ಅನುಮತಿ ನೀಡಲೂಬಹುದು ಎನ್ನಲಾಗ್ತಿದೆ. ಕೋವಿಡ್ ಹಿನ್ನೆಲೆ ಅನುಮತಿ ನೀಡಬೇಕೇ? ಬೇಡವೇ? ಎಂಬ ಗೊಂದಲದಲ್ಲಿ ಸರ್ಕಾರ ಇದೆ. ಷರತ್ತುಬದ್ಧ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರ ಪ್ಲಾನ್ ಮಾಡಲಿದೆ ಎಂದು ಹೇಳಲಾಗಿದೆ. ಸಾರ್ವಜನಿಕ ಗಣೇಶೋತ್ಸವದ ಬೇಕು-ಬೇಡಗಳ ಬಗ್ಗೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಭಕ್ತಾದಿಗಳು ಹಾಗೂ ತಜ್ಞರ ಸಲಹೆಗಳ ನಡುವೆ ಸಿಲುಕಿದೆ.

ಕೆಲವೊಂದು ಷರತ್ತುಗಳೊಂದಿಗೆ ಅನುಮತಿ?

ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೆಲ ಷರತ್ತುಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೂಡ ಗಣೇಶೋತ್ಸವ ಆಚರಣೆಗೆ ಅನುಮತಿ ಹಾಗೂ ವಾರಾಂತ್ಯದ ಕರ್ಫ್ಯೂ ಹಿಂಪಡೆದುಕೊಳ್ಳುವ ವಿಚಾರವಾಗಿ ಸುದೀರ್ಘವಾದ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ಪ್ಯಾರಾಲಿಂಪಿಕ್ಸ್​​​ ಸಮಾರೋಪ ಸಮಾರಂಭ: ಭಾರತದ ಧ್ವಜಧಾರಿಯಾಗಿ ಅವನಿ ಲೇಖರಾ

ರಾಜ್ಯದಲ್ಲಿ ಕೊರೊನಾ ವೈರಸ್​​ ನಿಯಂತ್ರಣದಲ್ಲಿರುವ ಕಾರಣ ಹಾಗೂ ಸರ್ಕಾರದ ಮೇಲೆ ಹೆಚ್ಚಿನ ಒತ್ತಡವಿರುವ ಕಾರಣ ಕೆಲವೊಂದು ನಿರ್ಬಂಧ ವಿಧಿಸಿ, ಸಾರ್ವಜನಿಕ ಹಬ್ಬ ಆಚರಣೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಕಳೆದ ವರ್ಷಕ್ಕಿಂತಲೂ ನಿರ್ಬಂಧಗಳು ಸಡಲಿಕೆಯಾಗುವ ಸಾಧ್ಯತೆ ಇದೆ. ಆದರೆ ದೊಡ್ಡ ಮಟ್ಟದ ಉತ್ಸವಗಳಿಗೆ ಅನುಮತಿ ನೀಡುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಗೌರಿ-ಗಣೇಶ ಹಬ್ಬಕ್ಕೆ ತಜ್ಞರ ಸಲಹೆ ಏನು?

* ಗಣೇಶ ಹಬ್ಬವನ್ನ ಸರಳವಾಗಿ ತಮ್ಮ ತಮ್ಮ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಆಚರಿಸಿ.

* ಸಾರ್ವಜನಿಕ ಸ್ಥಳ, ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈ ವರ್ಷವೂ ಅವಕಾಶ ಬೇಡ.

* ಹೊರಾಂಗಣ ವೇದಿಕೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ರೂ, ಕಡ್ಡಾಯ ಮಾರ್ಗಸೂಚಿ ಪಾಲನೆ.

* ಗಣೇಶ ಮೂರ್ತಿ ತರುವಾಗ ಹಾಗೂ ನಿಮಜ್ಜನ ಮಾಡುವಾಗ ಯಾವುದೇ ಮೆರವಣಿಗೆಗೆ ಅವಕಾಶ ನಿರ್ಬಂಧ.

* ಉತ್ಸವ ಹಾಗೂ ಮನರಂಜನಾ ಕಾರ್ಯಕ್ರಮಕ್ಕೆ ಬ್ರೇಕ್.

* ಪಾರಂಪರಿಕ ಮೂರ್ತಿಗಳನ್ನ ಮನೆಯಲ್ಲಿಯೇ ನಿಮಜ್ಜನ ಮಾಡಬೇಕು ಅಥವಾ ಸಮೀಪದ ಪಾಲಿಕೆಯ ಜಿಲ್ಲಾಡಳಿತ ಹೊಂಡ ಕಲ್ಯಾಣಿಗಳಲ್ಲಿ ನಿಮಜ್ಜನ ನೆರವೇರಿಸಬೇಕು.

* ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸ್ ಕಡ್ಡಾಯ.

* ದೇವಸ್ಥಾನಗಳಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ.

* ದೇವಸ್ಥಾನಗಳಲ್ಲಿ ಆರು ಅಡಿಗೊಂದರಂತೆ ಮಾರ್ಕ್ ಮಾಡಬೇಕು. ಭಕ್ತರು ಕಡ್ಡಾಯ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕು.

* ಗೌರಿ- ಗಣೇಶ ಹಬ್ಬದ ವೇಳೆ ಹೆಚ್ಚು ಜನದಟ್ಟಣೆಯಾಗದಂತೆ ಕ್ರಮವಹಿಸುವುದು.

ABOUT THE AUTHOR

...view details