ಕರ್ನಾಟಕ

karnataka

ETV Bharat / state

ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಗೆ ನಿರ್ಧಾರ.. ರಾಜ್ಯದಲ್ಲಿ ಶುರುವಾಗಲಿದೆಯಾ ಭಗವದ್ಗೀತೆ ದಂಗಲ್!? - ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಭಗವದ್ಗೀತೆಯನ್ನು ಶಾಲೆಗಳಲ್ಲಿ ಬೋಧನೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ವಿಷಯ ಮುಂದೆ ರಾಜಕೀಯ ದಂಗಲ್​ ಆಗಿ ಪರಿವರ್ತನೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದಲ್ಲಿ ಶುರುವಾಗಲಿದೆಯಾ ಭಗವದ್ಗೀತೆ ದಂಗಲ್...!
ರಾಜ್ಯದಲ್ಲಿ ಶುರುವಾಗಲಿದೆಯಾ ಭಗವದ್ಗೀತೆ ದಂಗಲ್...!

By

Published : Aug 3, 2022, 7:00 PM IST

ಬೆಂಗಳೂರು: ಕೆಲ ತಿಂಗಳ ಹಿಂದೆ ಹೊತ್ತಿ ಉರಿದಿದ್ದ ಪಠ್ಯ ಪರಿಷ್ಕರಣೆ ದಂಗಲ್ ತಣ್ಣಗಾಗಿದ್ದು, ಇದೀಗ ಶಿಕ್ಷಣ ಇಲಾಖೆಯಲ್ಲಿ ಹೊಸದೊಂದು ಆಚರಣೆ ಧರ್ಮ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆಯನ್ನು ಎಲ್ಲಾ ಶಾಲೆಗಳಲ್ಲಿ ಬೋಧನೆ ಮಾಡಲು ಸರ್ಕಾರ ಮುಂದಾಗಿದೆ.

ರಾಮಾಯಣ, ಮಹಾಭಾರತದ ಕುರಿತಾದ ಪಠ್ಯಗಳು ಸಿದ್ಧಗೊಳ್ಳುತ್ತಿದ್ದು, ವಾರದಲ್ಲಿ ಒಂದು ದಿನ ಮಕ್ಕಳಿಗೆ ಪಾಠ ಮಾಡಲಾಗುತ್ತದೆ ಎಂದು ಹೇಳಲಾಗ್ತಿದೆ. ನೈತಿಕ ಪಾಠದ ಅಡಿಯಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಕೂಡಾ ರಚನೆ ಆಗಲಿದೆ.

ಗುಜರಾತ್ ನಲ್ಲಿ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಪಠಣ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಪಠ್ಯ ತಯಾರಿ ನಡೆಸಲಾಗುತ್ತಿದೆ ಎನ್ನಲಾಗ್ತಿದೆ.

ತಿಂಗಳ ಕೊನೆಯಲ್ಲಿ ರೂಪುರೇಷೆ ಅಂತಿಮ: ಈ ತಿಂಗಳ ಕೊನೆಯಲ್ಲಿ ಅಂತಿಮ ಪಠ್ಯದ ರೂಪುರೇಷೆ ಸಿದ್ಧವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಮೃತಮಹೋತ್ಸವ.. ಮಾಜಿ ಸಿಎಂಗೆ ರೇಷ್ಮೆ ಶಾಲು ಹೊದಿಸಿ ಶುಭಾಶಯ ಕೋರಿದ ಡಿಕೆಶಿ

ABOUT THE AUTHOR

...view details