ಕರ್ನಾಟಕ

karnataka

ETV Bharat / state

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ತೀರ್ಮಾನ : ಸಚಿವ ಆರ್. ಅಶೋಕ್ - kasturi rangan report

ಕಸ್ತೂರಿ ರಂಗನ್ ವರದಿ ವಿರೋಧಿಸಲು ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ. 6 ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಎದುರಾಗಿದೆ. ಹಾಗಾಗಿ, ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ತೀರ್ಮಾನ
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ತೀರ್ಮಾನ

By

Published : Dec 28, 2020, 10:10 PM IST

Updated : Dec 28, 2020, 11:03 PM IST

ಬೆಂಗಳೂರು: ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವರದಿಯನ್ನು ತಿರಸ್ಕರಿಸಲು ತೀರ್ಮಾನಿಸಿದೆ.

ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು ಸಂಜೆ ವಿಧಾನಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಕಸ್ತೂರಿ ರಂಗನ್ ವರದಿ ವಿರೋಧಿಸಲು ಸರ್ಕಾರ ತೀರ್ಮಾನ ಮಾಡಿದೆ. 6 ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಎದುರಾಗಿದೆ. ಹಾಗಾಗಿ, ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ತೀರ್ಮಾನಿಸಲಾಗಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ:

ಜನರು ಈಗ ಹೋರಾಟದ ಹಾದಿ ಹಿಡಿದಿದ್ದಾರೆ. ಈ ಬಗ್ಗೆ ಇಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಯಿತು. ವರದಿ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್ ಮುಂದೆ ಎಸ್​​ಎಲ್​​ಪಿ ಹಾಕಲು ಸಹ ನಿರ್ಧರಿಸಲಾಗಿದೆ ಎಂದು ಸಚಿವ ಅಶೋಕ್​​ ಹೇಳಿದರು.

ಸಚಿವ ಆರ್. ಅಶೋಕ್

ಎನ್​​ಜಿಟಿಯಲ್ಲಿ ಡಿಸೆಂಬರ್ 31 ರಂದು ವಿಚಾರಣೆ ಇದೆ. ಕೇಂದ್ರ ಸರ್ಕಾರದ ಗಮನಕ್ಕೆ ರಾಜ್ಯದ ಜನರ ಭಾವನೆ ತಿಳಿಸುತ್ತೇವೆ ಎಂದ ಅವರು, ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಪತ್ರ ಬರೆಯುವುದರ ಜೊತೆಗೆ ಸುಪ್ರೀಂ ಕೋರ್ಟ್​​ವರೆಗೂ ಮೊರೆ ಹೋಗಬೇಕೆಂದುಕೊಂಡಿದ್ದೇವೆ ಎಂದರು.

ಸುಪ್ರೀಂ ಕದ ತಟ್ಟಲೂ ರಾಜ್ಯ ಸಿದ್ಧ:

ಎಕೋ ಝೋನ್ 10 ಕಿಲೋಮೀಟರ್ ಇದೆ, ಇದನ್ನು ಕಡಿಮೆ ಮಾಡಬೇಕು ಎಂದಿದೆ. ಇದರಲ್ಲಿ ಪಟ್ಟಣ ಪಂಚಾಯತಿ, ಪುರಸಭೆ ಎಲ್ಲಾ ಬರುತ್ತವೆ. ಒಂದು ಕಿಲೋ ಮೀಟರ್ ಕಡಿಮೆ ಮಾಡಬೇಕು ಎಂಬ ತೀರ್ಮಾನ ಮಾಡಲಾಗುತ್ತದೆ. ಅರಣ್ಯ ಪ್ರದೇಶ ಅಲ್ಲ. ಅದರಿಂದ ಆಚೆಗೆ ಹತ್ತು ಕಿಲೋಮೀಟರ್ ಒಳಗೆ ಕೆಮಿಕಲ್ ಫ್ಯಾಕ್ಟರಿ ಏನೂ ಮಾಡುವ ಹಾಗೆ ಇಲ್ಲ. ಇದು ಅಂತಿಮ ಆಗಿಲ್ಲ, ಚರ್ಚೆ ಆಗುತ್ತಿದೆ. ರಾಜ್ಯದ ಜನರ ಕೂಗಿಗೆ ನಾವು ಸ್ಪಂದಿಸುವ ಕೆಲಸ ಮಾಡಿದ್ದೇವೆ. ಎನ್​​ಜಿಟಿ ಅಡ್ಡಿ ಮಾಡಿದರೆ ಸುಪ್ರೀಂ ಕೋರ್ಟ್​​ಗೆ ಮೊರೆ ಹೋಗುತ್ತೇವೆ. ಈ ವರದಿ ವಿರುದ್ಧ ಹೋರಾಟ ನಡೆಯುತ್ತಿದೆ. ಇದರಿಂದ ಗಂಡಾಂತರ ಬಂದಿದೆ, ಆ ಭಾಗದಲ್ಲಿ ಅಭಿವೃದ್ಧಿ ಆಗಲ್ಲ. ಇದು ಕಾರ್ಯ ಸಾಧುವಲ್ಲ. ಇದನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಕಸ್ತೂರಿ ರಂಗನ್ ವರದಿ ಕಾರ್ಯಸಾಧುವಲ್ಲ:

ಕಸ್ತೂರಿ ರಂಗನ್​ ವರದಿ ಜಾರಿ ಮಾಡಲು ಸಾಧ್ಯವೇ ಇಲ್ಲ. ಕೇರಳ ಮಾದರಿಯಲ್ಲಿ ವರದಿ ವಿರೋಧಿಸಲು ತೀರ್ಮಾನ ಮಾಡಲಾಗಿದೆ. ಒಂಭತ್ತು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ಜಟಾಪಟಿ ಇದೆ. ನಾವು ರೆವಿನ್ಯೂ ಜಮೀನು ಎಂದರೆ, ಅವರು ಅರಣ್ಯ ಜಾಗ ಎನ್ನುತ್ತಿದ್ದಾರೆ. ಯಾವ ಜಾಗ ಇತ್ತು ಅದನ್ನೆಲ್ಲಾ ಗೋಮಾಳ ಅಂತ ಮಾಡಿದ್ದಾರೆ. ರಾಜ್ಯದಲ್ಲಿ ಒಂದು ಪರ್ಸೆಂಟ್ ಗ್ರೀನರಿ ಹೆಚ್ಚಿದೆ. ಆರು ಲಕ್ಷ ಎಕರೆ ಜಮೀನು ಕಂದಾಯ ಇಲಾಖೆಗೆ ಕೊಡುತ್ತಿದ್ದಾರೆ. ಉಳುಮೆ ಮಾಡುವುದಕ್ಕೆ, ಸರ್ಕಾರದ ಜಾಗಕ್ಕೆ ಇದನ್ನು ಬಳಸಿಕೊಳ್ಳುತ್ತೇವೆ. ಇದರಲ್ಲಿ ಫಾರೆಸ್ಟ್ ಜಾಗ ಇರಲ್ಲ, ಗೋಮಾಳದಂತಹ ಜಾಗ ಇರುವುದು, ಕಂದಾಯ ಜಾಗ ಏನು ಇದೆ ಅದು ಮಾತ್ರ ಎಂದು ಮಾಹಿತಿ ನೀಡಿದರು.

ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸಭೆ ನಡೆದಿದ್ದು, ಎನ್​​ಜಿಟಿನಲ್ಲಿ ಅಫಿಡವಿಟ್ ಹಾಕಬೇಕಿತ್ತು. ಇದರಲ್ಲಿ ರಾಜ್ಯ ಸರ್ಕಾರ ಪಾರ್ಟಿ ಅಲ್ಲ, ಕೇಂದ್ರ ಸರ್ಕಾರ ಪಾರ್ಟಿ. ಕಸ್ತೂರಿ ರಂಗನ್ ಅವರ ವರದಿ ಅವೈಜ್ಞಾನಿಕ, ಅಲ್ಲಿ ವಾಸ ಮಾಡುವವರಿಗೆ ತೊಂದರೆ ಇದೆ. ಜೊತೆಗೆ ಸಾಕಷ್ಟು ನ್ಯೂನತೆಗಳು ಆಗಿವೆ ಎಂದು ಹೇಳಿದರು.

ಸಭೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಇದ್ದರು.

Last Updated : Dec 28, 2020, 11:03 PM IST

ABOUT THE AUTHOR

...view details