ಬೆಂಗಳೂರು:ಯುದ್ದಪೀಡಿತ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಕ್ಷಿಸಿ, ವಾಪಸ್ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐಎಫ್ಎಸ್ ಅಧಿಕಾರಿ ಮನೋಜ್ ರಾಜನ್ರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ.
ನೋಡಲ್ ಅಧಿಕಾರಿ ವಿದೇಶಾಂಗ ಸಚಿವಾಲಯ ಹಾಗೂ ಉಕ್ರೇನ್ ಕಿವ್ನಲ್ಲಿನ ಭಾರತೀಯ ದೂತವಾಸದ ಜೊತೆ ಸಮನ್ವಯ ಸಾಧಿಸಿ ಅಲ್ಲಿ ಸಿಲುಕಿಕೊಂಡಿರುವ ರಾಜ್ಯದ ಜನರನ್ನು ಕರೆತರುವ ಕೆಲಸ ಮಾಡಲಿದ್ದಾರೆ. ಸಿಎಂ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿಯವರು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಕಿವ್ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.