ಬೆಂಗಳೂರು: ಎಲ್ಲ ಆಸ್ಪತ್ರೆಗಳು ಬೆಡ್ ಲಭ್ಯತೆ, ಅಗತ್ಯ ಮೆಡಿಸಿನ್ ಲಭ್ಯತೆ ವಿವರವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸರ್ಕಾರ ಆದೇಶಿಸಿದೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಅನೇಕ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೇ ಸಮಸ್ಯೆ ಎದುರಾಗುತ್ತಿದೆ.

ಬಿಬಿಎಂಪಿ ಕೇಂದ್ರೀಕೃತ ಹಂಚಿಕೆ ವ್ಯವಸ್ಥೆಯಡಿ ಸೋಂಕಿತರಿಗೆ ಬೆಡ್ ಹಂಚಿಕೆ ಮಾಡಿದರೂ, ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ಎಲ್ಲ ಆಸ್ಪತ್ರೆಗಳ ರಿಸೆಪ್ಷನ್ ಕೌಂಟರ್ ನಲ್ಲಿ ಬೆಡ್ ಲಭ್ಯತೆಯ ಬೋರ್ಡ್, ಅಗತ್ಯ ಮೆಡಿಸಿನ್ಗಳ ಲಭ್ಯತೆಯ ವಿವರವನ್ನು ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಡಿಸ್ಪ್ಲೇ ಬೋರ್ಡ್ನಲ್ಲಿ ಆಸ್ಪತ್ರೆಯ ಹೆಸರು, ಒಟ್ಟು ಬೆಡ್ಗಳ ಸಂಖ್ಯೆ, ಬಿಬಿಎಂಪಿಯಿಂದ ರೆಫರ್ ಮಾಡಲಾದ ಕೋವಿಡ್ ಸೋಂಕಿತರಿಗೆ ಹಂಚಲಾದ ಬೆಡ್ಗಳ ವಿವರಗಳನ್ನು ನೀಡಬೇಕು. ಜನರಲ್ ವಾರ್ಡ್ ನಲ್ಲಿರುವ ಐಸೋಲೇಷನ್ ಬೆಡ್, ಐಸಿಯು ಬೆಡ್, ವೆಂಟಿಲೇಟರ್ ಹೊಂದಿದ ಐಸಿಯು ಬೆಡ್, ಹೈ ಫ್ಲೋ ಆಕ್ಸಿಜನ್ ಬೆಡ್ ಗಳ ವಿವರವನ್ನು ಪ್ರದರ್ಶಿಸಬೇಕು.
ಎಲ್ಲ ಜಿಲ್ಲಾ ಆಸ್ಪತ್ರಗಳಲ್ಲೂ ಈ ಮಾಹಿತಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಆದೇಶ ಪಾಲಿಸದೇ ಇರುವ ಆಸ್ಪತ್ರೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.