ಕರ್ನಾಟಕ

karnataka

ETV Bharat / state

ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ - 2ಸಿ 2ಡಿ ಮೀಸಲಾತಿ

ಮೀಸಲಾತಿ ವಿಚಾರದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗಾಗಿ ಪ್ರತ್ಯೇಕ ಪ್ರವರ್ಗ ರಚಿಸಲು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದೆ.

Etv Bharat
Etv Bharat

By

Published : Dec 29, 2022, 7:44 PM IST

Updated : Dec 29, 2022, 9:42 PM IST

ಮೀಸಲಾತಿ ಬಗ್ಗೆ ಸುದ್ದಿಗೋಷ್ಠಿ

ಬೆಂಗಳೂರು:ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಸರ್ಕಾರ ಸಿಹಿಸುದ್ದಿ ನೀಡಿದೆ.

ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. 3ಬಿ ಪ್ರವರ್ಗದಲ್ಲಿದ್ದ ಲಿಂಗಾಯತರಿಗೆ 2ಡಿ ಪ್ರವರ್ಗ ಹಾಗೂ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗರಿಗಾಗಿ 2ಸಿ ಪ್ರತ್ಯೇಕ ಪ್ರವರ್ಗ ರಚಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರದ ಜಾಣ ನಡೆ ಇಟ್ಟಿದೆ. ಆದರೆ, ಇನ್ನೂ ಮೀಸಲಾತಿ ಪ್ರಮಾಣ ಘೋಷಿಸಿಲ್ಲ. ಮುಂದಿನ ದಿನಗಳಲ್ಲಿ ಮೀಸಲಾತಿ ಪ್ರಮಾಣ ಘೋಷಿಸಲು ತೀರ್ಮಾನಿಸಿದೆ.

ಇನ್ನೂ ಮೀಸಲಾತಿ ಪ್ರಮಾಣವನ್ನು ನಿಗದಿಗೊಳಿಸಿಲ್ಲ‌. ಮುಂದಿನ ದಿನಗಳಲ್ಲಿ ಮೀಸಲಾತಿಯ ಪ್ರಮಾಣ ನಿಗದಿಪಡಿಸಲಾಗುವುದು. ಈ ಎರಡೂ ಸಮುದಾಯಗಳಿಗೆ EWSನ 10% ಮೀಸಲಾತಿಯಿಂದ ಎಷ್ಟು ಉಳಿಯುತ್ತೋ ಅದನ್ನು 2D ಮತ್ತು 2Cಗೆ ಶಿಫ್ಟ್ ಮಾಡುವ ಚಿಂತನೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

2ಎ ಮತ್ತು 2 ಬಿ ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ಯಾವುದೇ ತೊಂದೆರೆಯಾಗಬಾರದೆಂದು ಹಿಂದೂಳಿದ ವರ್ಗಗಳ ಆಯೋಗ ವರದಿ ನೀಡಿದೆ. 3ಎ, 3ಬಿಯನ್ನು ಕ್ರಮವಾಗಿ 2ಸಿ ಮತ್ತು 2ಡಿ ರಚಿಸಲು ಹಿಂದೂಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದ್ದು, ಅದನ್ನು ಸರ್ಕಾರ ಒಪ್ಪಿದೆ. ಬೇರೆ ಯಾರಿಗೂ ತೊಂದರೆಯಾಗದಂತೆ ಹೊಸದಾಗಿ 2ಸಿ ಮತ್ತು 2ಡಿ ರಚನೆ ಮಾಡುತ್ತಿದ್ದೇವೆ. ಮುಂದೆ EWSಯಲ್ಲಿ ಉಳಿಯುವ ಮೀಸಲಾತಿಯನ್ನು 2ಸಿ ಮತ್ತು 2ಡಿಗೆ ಹಂಚಲು ನಿರ್ಧರಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಮೂಲಗಳ ಪ್ರಕಾರ, ಲಿಂಗಾಯತರಿಗಾಗಿ 2D ಪ್ರವರ್ಗದಲ್ಲಿ 7% ಮೀಸಲಾತಿ ಹಾಗೂ ಒಕ್ಕಲಿಗರಿಗಾಗಿ 2C ಪ್ರವರ್ಗದಲ್ಲಿ 6% ಮೀಸಲಾತಿ ಕಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ:ಪಂಚಮಸಾಲಿಗಳ ಒಡಲಿನ‌ ಧ್ವನಿ ಸರ್ಕಾರಕ್ಕೆ ಮುಟ್ಟಿದೆ: ಜಯಮೃತ್ಯುಂಜಯ ಸ್ವಾಮೀಜಿ

ಕಳೆದ ಒಂದು ವರ್ಷದಿಂದ ಬಸವ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದಿಂದ ಪ್ರಬಲ ಪ್ರತಿಭಟನೆ ನಡೆಯುತ್ತಿತ್ತು. ಕಳೆದ ವಾರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಶ್ರೀಗಳು ನಿರ್ಧರಿಸಿದ್ದರು. ಆದರೆ ಸಿಎಂ ಪಂಚಮಸಾಲಿ ಶ್ರೀಗಳು ಮತ್ತು ಸಮಾಜದ ಮುಖಂಡರ ಜತೆ ಚರ್ಚಿಸಿ, 29ಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು.

ಆ ಬಳಿಕ ಶ್ರೀಗಳು ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಇನ್ನೊಂದೆಡೆ ಒಕ್ಕಲಿಗರು ತಮ್ಮ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಸರ್ಕಾರವು ಎರಡು ಪ್ರಬಲ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗದಂತೆ ಪ್ರತ್ಯೇಕ ಪ್ರವರ್ಗ ರಚಿಸುವ ತೀರ್ಮಾನ ಮಾಡಿದೆ. ಜೊತೆಗೆ 2A ಪ್ರವರ್ಗದಲ್ಲಿ ಯಾವುದೇ ಬದಲಾವಣೆ ಆಗದಂತೆ ಜಾಣೆ ನಡೆ ಅನುಸರಿಸಿದೆ.‌

Last Updated : Dec 29, 2022, 9:42 PM IST

ABOUT THE AUTHOR

...view details