ಕರ್ನಾಟಕ

karnataka

ETV Bharat / state

ಸ್ಟಾರ್ಟ್‌ಅಪ್ ಸಮೀಕ್ಷೆ ನಡೆಸಲು ನಿರ್ಧರಿಸಿದ ಕರ್ನಾಟಕ ಸರ್ಕಾರ - government has decided to conduct a survey

govt to conduct survey of startups: ಬೆಂಗಳೂರು ದೇಶದಲ್ಲಿ 'ಸ್ಟಾರ್ಟ್‌ಅಪ್ ಸ್ವರ್ಗ' ಎಂಬ ಸ್ಥಾನಮಾನ ಖಚಿತಪಡಿಸಿಕೊಳ್ಳಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.

Representative image
ಪ್ರಾತಿನಿಧಿಕ ಚಿತ್ರ

By

Published : Aug 2, 2023, 7:20 AM IST

ಬೆಂಗಳೂರು: ರಾಜ್ಯದಲ್ಲಿನ ಸ್ಟಾರ್ಟ್‌ಅಪ್​ಗಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಈ ಸಂಬಂಧ ಐಟಿ - ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ.

"ಎಲ್ಲ ನೋಂದಾಯಿತ ಸ್ಟಾರ್ಟ್‌ಅಪ್‌ಗಳಿಗೆ ಮನವಿ.. ಕರ್ನಾಟಕ ಸರ್ಕಾರದ ಐಟಿ ಮತ್ತು ಬಿಟಿ ಸಚಿವಾಲಯವು ನಿಮ್ಮ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆ ನಡೆಸುತ್ತಿದೆ. ಸಂಗ್ರಹಿಸಿದ ಪ್ರತಿಕ್ರಿಯೆಗಳ ಆಧಾರದ ಮೇಲೆ, ನಾವು ಕರ್ನಾಟಕದ ಸ್ಟಾರ್ಟ್‌ಅಪ್ ಸಮುದಾಯವನ್ನು ಬೆಂಬಲಿಸಲು ಸೂಕ್ತವಾದ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ವಿನ್ಯಾಸಗೊಳಿಸುತ್ತೇವೆ. ಆಯ್ದ ವಲಯವಾರು ಸ್ಟಾರ್ಟ್‌ಅಪ್‌ಗಳು ಸರ್ಕಾರದೊಂದಿಗೆ ಬಹಿರಂಗ ಸಭೆಯ ಚರ್ಚೆಗಳಲ್ಲಿ ಭಾಗವಹಿಸಬಹುದು" ಎಂದು ಟ್ವೀಟ್​ ಮೂಲಕ ಕರೆ ನೀಡಿದ್ದಾರೆ.

ಟ್ವೀಟ್​ ಖಾತೆಯಲ್ಲಿ ಫಾರ್ಮ್ ತುಂಬಲು ಲಿಂಕ್:ಅರ್ಜಿ ಸಲ್ಲಿಕೆಗೆ ಆಗಸ್ಟ್ 9 ಕೊನೆಯ ದಿನಾಂಕವಾಗಿದೆ. ಖರ್ಗೆ ಅವರ ಅಧಿಕೃತ ಟ್ವೀಟ್​ ಖಾತೆಯಲ್ಲಿ ಫಾರ್ಮ್ ತುಂಬಲು ಲಿಂಕ್ ಇದೆ. ಬೆಂಗಳೂರು ದೇಶದಲ್ಲಿ 'ಸ್ಟಾರ್ಟ್‌ಅಪ್ ಸ್ವರ್ಗ' ಎಂಬ ಸ್ಥಾನಮಾನ ಖಚಿತಪಡಿಸಿಕೊಳ್ಳಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ದೇಶದ ಐಟಿ ರಾಜಧಾನಿಯಲ್ಲಿ ಸ್ಟಾರ್ಟಪ್‌ಗಳಿಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸಲು ಇಲಾಖೆ ಉದ್ದೇಶಿಸಿದೆ.

25 ಸಾವಿರ ಸ್ಟಾರ್ಟ್‌ಅಪ್‌ ಸ್ಥಾಪಿಸುವ ಗುರಿ:ಕರ್ನಾಟಕದಲ್ಲಿ 15,000 ಸ್ಟಾರ್ಟ್​ ಅಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಹೊಸ ಪ್ರಯತ್ನಗಳೊಂದಿಗೆ ಸರ್ಕಾರ ಇನ್ನೂ 10,000 ಸ್ಟಾರ್ಟಪ್‌ಗಳನ್ನು ಹೆಚ್ಚಿಸಲು ಬಯಸಿದೆ. ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸ್ಟಾರ್ಟಪ್ ವಲಯದಲ್ಲಿ ಕರ್ನಾಟಕ ಮುನ್ನಡೆಸಲು ರಾಜ್ಯದ ಸ್ಟಾರ್ಟಪ್ ನೀತಿಯನ್ನು ವಿನ್ಯಾಸಗೊಳಿಸಿದೆ. 2022ರ ಡಿಸೆಂಬರ್‌ನಲ್ಲಿ ಈ ನೀತಿ 2027ರ ವೇಳೆಗೆ ರಾಜ್ಯದಲ್ಲಿ 25,000 ಸ್ಟಾರ್ಟ್‌ ಅಪ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

ಇದನ್ನೂ ಓದಿ:'ಅಮೆರಿಕದ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ಕೆಲಸ ನಿರ್ವಹಿಸಲು 'ಸ್ಟಾರ್ಟಪ್‌ ಸಿಲಿಕ್ಯಾನ್‌ ವ್ಯಾಲಿ ಬ್ರಿಡ್ಜ್‌ 'ರಚನೆ'

ಸ್ಟಾರ್ಟ್​ ಅಪ್‌ಗಳ ನೆರವಿಗೆ ಬೂಸ್ಟರ್ ಕಿಟ್‌ ಉಪಕ್ರಮ: ಕಳೆದ ನವೆಂವರ್​ ತಿಂಗಳಿನಲ್ಲೂ ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ನೆರವು ನೀಡುವ ಉದ್ದೇಶದ ಬೂಸ್ಟರ್ ಕಿಟ್‌ ಉಪಕ್ರಮಕ್ಕೆ ಅಂದಿನ ಐಟಿ - ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಚಾಲನೆ ನೀಡಿದ್ದರು.

ಒಟ್ಟು ಒಂಬತ್ತು ಸಂಸ್ಥೆಗಳ ಜತೆಗೆ ಕರ್ನಾಟಕ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್‌) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ ಅವರು ಸರ್ಕಾರದ ಪರವಾಗಿ ಸಹಿ ಹಾಕಿದ್ದರು. ಈ ಸಂಬಂಧವಾಗಿ ಗೂಗಲ್‌, ಪೇಟಿಎಂ, ಎಚ್‌ಡಿಎಫ್‌ಸಿ, ರೇಜರ್ ಪೇ, ಮೈಕ್ರೋಸಾಫ್ಟ್‌, ಗೆಯ್ನ್, ದಯಾನಂದ ಸಾಗರ್ ಉದ್ಯಮಶೀಲತಾ ಮತ್ತು ವಾಣಿಜ್ಯ ಪರಿಪೋಷಣಾ ಕೇಂದ್ರ, ಎಡಬ್ಲ್ಯುಎಸ್‌ ಮತ್ತು ಸ್ಟ್ರಾಂಗ್‌ಹರ್ ವೆಂಚರ್ಸ್​​ ಜತೆಗೆ ಐಟಿ-ಬಿಟಿ ಇಲಾಖೆ ಮತ್ತು ಕರ್ನಾಟಕ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಸೊಸೈಟಿಗಳು (ಕಿಟ್ಸ್‌) ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿದ್ದವು.

ಇದನ್ನೂ ಓದಿ:ಸ್ಟಾರ್ಟ್​ ಅಪ್‌ಗಳ ನೆರವಿಗೆ ಬೂಸ್ಟರ್ ಕಿಟ್‌ ಉಪಕ್ರಮ, 9 ಒಡಂಬಡಿಕೆಗೆ ಅಂಕಿತ

ABOUT THE AUTHOR

...view details