ಕರ್ನಾಟಕ

karnataka

ETV Bharat / state

ರಾಜ್ಯ ವ್ಯಾಪಿ ಕೋವಿಡ್ ನಿರ್ವಹಣೆ: 11 ವಿಶೇಷ ಕಾರ್ಯಪಡೆ ರಚಿಸಿ ಆದೇಶ - ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್

ಈ ಸಂಬಂಧ ಆದೇಶ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಕಾರ್ಯಪಡೆಯನ್ನು ರಚಿಸಿದ್ದು. ಈ ಕಾರ್ಯತಂಡ ಅವಶ್ಯವಿರುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಹಾಗೂ ತಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಬ್ದಾರಿ ನೀಡಲಾಗಿದೆ.

Karnataka government formed 11 special forces to control COVID 19
ಕೋವಿಡ್ ನಿರ್ವಹಣೆಗೆ11 ವಿಶೇಷ ಕಾರ್ಯಪಡೆ ರಚನೆ

By

Published : Jan 5, 2022, 3:00 AM IST

ಬೆಂಗಳೂರು:ರಾಜ್ಯ ವ್ಯಾಪ್ತಿ ಕೋವಿಡ್-19 ಸೋಂಕು ಹಾಗೂ ಓಮಿಕ್ರಾನ್ ಮೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ವಿಶೇಷ ಕಾರ್ಯತಂಡ ರಚಿಸಿ ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಕಾರ್ಯಪಡೆಯನ್ನು ರಚಿಸಿದ್ದಾರೆ. ಈ ಕಾರ್ಯತಂಡ ಅವಶ್ಯವಿರುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಹಾಗೂ ತಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಬ್ದಾರಿ ನೀಡಲಾಗಿದೆ.

ಕಾರ್ಯತಂಡ ವಿವರ ಇಂತಿದೆ:

  • ಕೋವಿಡ್ ವಾರ್ ರೂಂ- ಮುನಿಷ್ ಮೌದ್ಗಿಲ್
  • ILI, SARI ಪ್ರಕರಣಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸುವುದು- ವಿನೂತ್ ಪ್ರಿಯಾ
  • ಸ್ಯಾಂಪಲ್ ಕಲೆಕ್ಷನ್, ಟೆಸ್ಟಿಂಗ್, ಲ್ಯಾಬ್ ಬಳಕೆ- ಶಾಲಿನಿ ರಜನೀಶ್
  • ಹೋಂ ಐಸೋಲೇಷನ್, ಕಂಟೈನ್ಮೆಂಟ್ ಝೋನ್- ಪಂಕಜ್ ಕುಮಾರ್ ಪಾಂಡೆ
  • ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್​ಗಳ ಚಲನವಲನ ಮೇಲ್ವಿಚಾರಣೆ- ಪ್ರತಾಪ್ ರೆಡ್ಡಿ ಮತ್ತು ಎನ್.ಶಿವಶಂಕರ್
  • ಬಳ್ಳಾರಿಯಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್​ಗಳ ಚಲನವಲನ ಮೇಲ್ವಿಚಾರಣೆ- ಪವನ್ ಕುಮಾರ್
  • ಟೆಲಿ ಕೌನ್ಸಿಲಿಂಗ್, ಟೆಲಿ ಟ್ರಯಾಜಿಂಗ್, ಹೆಲ್ಪ್ ಲೈನ್- ವಿಪಿನ್ ಸಿಂಗ್, ವಿಸ್ವಜಿತ್ ಮಿಶ್ರ
  • ಖಾಸಗಿ, ಎನ್​​ಜಿಒ, ಕಾರ್ಪೊರೇಟ್ ವಲಯಗಳ ಜೊತೆ ಸಮನ್ವಯತೆ- ಉಮಾ ಮಹಾದೇವನ್
  • ಕೋವಿಡ್​ನಿಂದ ಪೋಷಕರನ್ನು ಕಳೆದು ಅನಾಥರಾದ ಮಕ್ಕಳಿಗೆ ಸೌಕರ್ಯ ಕಲ್ಪಿಸುವಿಕೆ- ಪಲ್ಲವಿ ಆಕೃತಿ
  • ಅಂತಾರಾಷ್ಟ್ರೀಯ ಸಮುದಾಯ, ಸಂಸ್ಥೆ ಜೊತೆ ಸಮನ್ವಯತೆ ಸಾಧಿಸಿ ಸಹಕಾರ- ಪೊನ್ನುರಾಜ್
  • ಕೋವಿಡ್ ಸಂಬಂಧಿತ ಪರಿಕರಣಗಳನ್ನು ಆಮದು ಮಾಡುವ ನೋಡಲ್ ಪ್ರಾಧಿಕಾರ- ಉಮಾ ಮಹಾದೇವನ್, ಪ್ರಿಯಾಂಕ್ ಮೇರಿ ಫ್ರಾನ್ಸಿಸ್

ಇದನ್ನೂ ಓದಿ:ಮಾಲ್​, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ

ABOUT THE AUTHOR

...view details