ಕರ್ನಾಟಕ

karnataka

ETV Bharat / state

ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚಿಸಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ! - ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ

ಉಭಯ ಸದನಗಳಲ್ಲಿ ಈ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು‌. ಇದು ತಾ.ಪಂ, ಜಿ.ಪಾಂ. ಚುನಾವಣೆ ಮುಂದೂಡುವ ಹುನ್ನಾರ ಎಂದು ಆರೋಪಿಸಿ ಕಾಂಗ್ರೆಸ್ ಸಭಾತ್ಯಾಗ ನಡೆಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಧಾನಮಂಡಲದಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿದೆ. ಇದರ ಬೆನ್ನಲೇ ಸರ್ಕಾರ ಆಯೋಗ ರಚಿಸಿ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

delimitation Commission  bill
ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆ

By

Published : Sep 19, 2021, 2:51 AM IST

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ವಿಂಗಡಣೆಗೆ ಆಯೋಗ ರಚಿಸಿ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ. ಶುಕ್ರವಾರವಷ್ಟೇ ವಿಧಾನಮಂಡಲದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ಸಿಕ್ಕಿತ್ತು. ಅದರಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಉಭಯ ಸದನಗಳಲ್ಲಿ ಈ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು‌. ಇದು ತಾ.ಪಂ, ಜಿ.ಪಾಂ. ಚುನಾವಣೆ ಮುಂದೂಡುವ ಹುನ್ನಾರ ಎಂದು ಆರೋಪಿಸಿ ಕಾಂಗ್ರೆಸ್ ಸಭಾತ್ಯಾಗ ನಡೆಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಧಾನಮಂಡಲದಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿದೆ. ಇದರ ಬೆನ್ನಲೇ ಸರ್ಕಾರ ಆಯೋಗ ರಚಿಸಿ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ವಿಧೇಯಕದ ಮೂಲ ಉದ್ದೇಶ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡನೆ ಆಯೋಗ (ಡಿಲಿಮಿಟೇಷನ್ ಕಮಿಷನ್) ರಚಿಸುವುದಾಗಿದೆ. ಈ ಆಯೋಗದ ಮೂಲಕ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ. ಈ ಹಿಂದೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಡಿದ ತಾ.ಪಂ ಹಾಗೂ ಜಿ.ಪಂ ಸೀಮಾ ನಿರ್ಣಯ (ಕ್ಷೇತ್ರ ಪುನರ್ವಿಂಗಡನೆ) ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಹೈ ಕೋರ್ಟ್​ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆಗಾಗಿ ವಿಧೇಯಕವನ್ನು ತರಲಾಗಿದೆ.

ಈ ವಿಧೇಯಕ ಜಾರಿಯಾದ ತಕ್ಷಣ ತಾಲೂಕು ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಎಲ್ಲಾ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ರದ್ದಾಗಲಿದೆ. ಜೊತೆಗೆ ಪ್ರಸ್ತುತವಿರುವ ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ತಾ.ಪಂ ಹಾಗೂ ಜಿ.ಪಂ. ಕ್ಷೇತ್ರಗಳ ಮೀಸಲಿರಿಸುವ ಎಲ್ಲಾ ಅಧಿಸೂಚನೆಗಳನ್ನು ಕೂಡಲೇ ರದ್ದಾಗಲಿದೆ.

ಆಯೋಗದ ಕಾರ್ಯವೈಖರಿ ಏನು?:

  • ಜನಗಣತಿ ಆಧಾರದಲ್ಲಿ ಪ್ರತಿ ಗ್ರಾ.ಪಂ, ತಾ.ಪಂ. ಮತ್ತು ಜಿ.ಪಂಚಾಯತಿಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಶಿಫಾರಸು ಮಾಡುವುದು.
  • ಜನಗಣತಿ ಆಧಾರದಲ್ಲಿ ಪ್ರತಿ ಗ್ರಾ.ಪಂ, ತಾ.ಪಂ. ಮತ್ತು ಜಿ.ಪಂಚಾಯತಿ ಪ್ರದೇಶವನ್ನು ಆಯಾ ಗ್ರಾಮ ಪಂ. ಅಥವಾ ತಾ.ಪಂ. ಅಥವಾ ಜಿ.ಪಂ. ಚುನಾಯಿಸಲು ಅಗತ್ಯವಾದ ಸದಸ್ಯರ ಸಂಖ್ಯೆಯನ್ನು ವಿಂಗಡಿಸಲು ಶಿಫಾರಸು ಮಾಡುವುದು
  • ಪ್ರತಿ ಗ್ರಾ.ಪಂ, ತಾ.ಪಂ., ಮತ್ತು ಜಿ.ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ವಾರ್ಡುಗಳು ಅಥವಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವುದಕ್ಕಾಗಿ ಶಿಫಾರಸು ಮಾಡುವುದು.

    ಸೀಮಾ ನಿರ್ಣಯ ಆಯೋಗ ರಚನೆ:
  • ಆಯೋಗಕ್ಕೆ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಅಪರ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಸರ್ಕಾರ ನೇಮಿಸುವ ಗ್ರಾಮೀಣಾಭಿವೃದ್ಧಿ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವಿಷಯಗಳಲ್ಲಿ ಅನುಭವ ಹೊಂದಿರುವ ನಿವೃತ್ತ ಕಾರ್ಯದರ್ಶಿ ಆಯೋಗದ ಸದಸ್ಯರಾಗಿರುತ್ತಾರೆ.
  • ಅದೇ ರೀತಿ ಸರ್ಕಾರ ನಾಮನಿರ್ದೇಶಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಲಯದಲ್ಲಿನ ಒಬ್ಬ ತಜ್ಞ ಸದಸ್ಯರಾಗಿರುತ್ತಾರೆ. ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ.

ABOUT THE AUTHOR

...view details