ಬೆಂಗಳೂರು: ವೀಕೆಂಡ್ ಲಾಕ್‌ಡೌನ್ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಅರಣ್ಯ ಪ್ರದೇಶಗಳು ಮತ್ತು ಅಭಯಾರಣ್ಯಗಳಲ್ಲಿ ಸಫಾರಿಗೆ ಅನುಮತಿ ನೀಡಲಾಗಿದೆ.
ಈ ಸಂಬಂಧ ಸ್ಪಷ್ಟೀಕರಣ ಹೊರಡಿಸಿರುವ ಸರ್ಕಾರ, ವಾರಾಂತ್ಯಕ್ಕೆ ಬುಕ್ಕಿಂಗ್ ಮಾಡಿ ಅಧಿಕೃತ ದಾಖಲೆಗಳನ್ನು ಹೊಂದಿರುವ ಪ್ರವಾಸಿಗರು ತಮ್ಮ ಕಾರು, ಟ್ಯಾಕ್ಸಿ ಮತ್ತು ಇತರ ಸಾರಿಗೆ ವಿಧಾನಗಳ ಮೂಲಕ ಪ್ರಯಾಣಿಸಲು ಅನುಮತಿಸಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ತಂಗಿರುವಂತಹ ಅತಿಥಿಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿದೆ.