ಬೆಂಗಳೂರು : ವಿಶ್ವದಾದ್ಯಂತ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ಮುಸ್ಲಿಂ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ. ಹಬ್ಬದ ಪ್ರಯುಕ್ತ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಘೋಷಣೆ - ರಂಜಾನ್ ಸಾರ್ವತ್ರಿಕ ರಜೆ ಘೋಷಣೆ ಮಾಡಿದ ರಾಜ್ಯ ಸರ್ಕಾರ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರವು ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ರಂದು ಸಾರ್ವತ್ರಿಕ ರಜೆ ಘೋಷಣೆ
ಖುತುಬ್ ಎ ರಂಜಾನ್ ಹಬ್ಬದ ಅಂಗವಾಗಿ 03.05.2022ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಬ್ಬವನ್ನು 02.05.2022ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ ಮೇ 2ರಂದು ಸಾರ್ವತ್ರಿಕ ರಜೆಯೆಂದು ಘೋಷಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ಗೆ ಡೋಂಟ್ ಕೇರ್.. ರಸ್ತೆ ಮಧ್ಯೆ ಕುಳಿತು ಉಪಹಾರ ಸೇವಿಸಿದ ಕುಡುಕ - ವಿಡಿಯೋ