ಕರ್ನಾಟಕ

karnataka

ETV Bharat / state

ನೆರೆಹಾನಿ ಕೈ‌ ಮಗ್ಗಕ್ಕೆ ಪರಿಹಾರ ಹಾಗೂ ಬೆಳೆ ಹಾನಿಗೆ ಪರಿಹಾರ ಮೊತ್ತ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ - karnataka government anounces flood relief amoutnt

ಸಂಪುಟ ಉಪಸಮಿತಿಯಲ್ಲಿ ಪ್ರವಾಹಕ್ಕೆ‌ ಹಾನಿಗೀಡಾದ ನೇಕಾರರ ಮಗ್ಗಗಳಿಗೂ ಪರಿಹಾರ ನೀಡಲು ಶಿಫಾರಸು ಮಾಡಲಾಗಿತ್ತು. ಅದರಂತೆ ಸಿಎಂ ಅಧಿವೇಶನದಲ್ಲಿ ಘೋಷಣೆಯನ್ನೂ ಮಾಡಿದ್ದರು. ಇದೀಗ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

WAIVERSCROPLOSS

By

Published : Oct 19, 2019, 5:40 AM IST

ಬೆಂಗಳೂರು:ಪ್ರವಾಹದಿಂದ ಹಾನಿಗೊಳಗಾದ ಕೈ ಮಗ್ಗ ಹಾಗು ವಿದ್ಯುತ್ ಮಗ್ಗಗಳಿಗೆ ಪರಿಹಾರ ನೀಡಲು ಸರ್ಕಾರ ಮಂಜೂರಾತಿ ನೀಡಿದೆ.

ಸಂಪುಟ ಉಪಸಮಿತಿಯಲ್ಲಿ ಪ್ರವಾಹಕ್ಕೆ‌ ಹಾನಿಗೀಡಾದ ನೇಕಾರರ ಮಗ್ಗಗಳಿಗೂ ಪರಿಹಾರ ನೀಡಲು ಶಿಫಾರಸು ಮಾಡಲಾಗಿತ್ತು. ಅದರಂತೆ ಸಿಎಂ ಅಧಿವೇಶನದಲ್ಲಿ ಘೋಷಣೆಯನ್ನೂ ಮಾಡಿದ್ದರು. ಇದೀಗ ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

ಕೈ ಮಗ್ಗ ಹಾನಿಗೆ ಪರಿಹಾರ:

ಹಾನಿಗೊಳಗಾದ ಉಪಕರಣ ಹಾಗು ಸಲಕರಣೆಗಳಿಗೆ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 4100 ರೂ. ನೀಡಲಾಗುತ್ತದೆ. ಇನ್ನು ಕಚ್ಚಾ ‌ಮಾಲು, ಸಿದ್ಧಪಡಿಸಿದ ಹಾಗೂ ಸಿದ್ಧಪಡಿಸಲಾಗುತ್ತಿರುವ ವಸ್ತುಗಳಿಗೆ 4,100 ರು. ಪರಿಹಾರ ನೀಡಲಾಗುತ್ತದೆ. ಇದರ ಜತೆಗೆ ರಾಜ್ಯ ಸರ್ಕಾರ ಎಸ್​ಡಿಆರ್​ಎಫ್/ಎನ್​ಡಿಆರ್​ಎಫ್ ಮಾರ್ಗಸೂಚಿಯಡಿಯ 4,100ರು. ಮೊತ್ತ ಒಳಗೊಂಡಂತೆ ಒಟ್ಟು 25,000 ರೂ. ಪರಿಹಾರ ನೀಡಲು ನಿರ್ಧರಿಸಿದೆ.

ಇನ್ನು ವಿದ್ಯುತ್ ಮಗ್ಗ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರವೇ ಒಟ್ಟು 25,000 ರು. ಪರಿಹಾರ ನೀಡುವಂತೆ ಆದೇಶಿಸಿದೆ.

ಬೆಳೆ ಹಾನಿ ಪರಿಹಾರ ಹೆಚ್ಚಿಸಿ ಆದೇಶ:

ಇನ್ನು ಪ್ರವಾಹದಿಂದ ಹಾನಿಯಾದ ಬೆಳೆಹಾನಿಗೆ ನಿಗದಿ ಪಡಿಸಿರುವ ಪರಿಹಾರ ದರವನ್ನು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಎಸ್​ಡಿಆರ್​ಎಫ್/ಎನ್​ಡಿಆರ್​ಎಫ್ ಮಾರ್ಗಸೂಚಿಯಡಿ ಕೊಡುವ ಪರಿಹಾರ ಮೊತ್ತಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಗೆ 10,000 ರು. ಪರಿಹಾರ ನೀಡಲು ಆದೇಶ ಹೊರಡಿಸಿದೆ.

ಅದರಂತೆ ಕೃಷಿ, ತೋಟಗಾರಿಕೆ ಹಾಗೂ ವಾರ್ಷಿಕ ಬೆಳೆಯುವ ಬೆಳೆ ಹಾನಿಗೆ ಖುಷ್ಕಿ ಪ್ರತಿ ಹಕ್ಟೇರಿಗೆ ಎನ್​ಡಿಆರ್​ಎಫ್ ಮಾರ್ಗಸೂಚಿಯಡಿ 6800 ರೂ ಜೊತೆಗೆ 10 ಸಾವಿರ ರೂ. ಹೆಚ್ಚುವರಿ ಮೊತ್ತ ಸೇರಿಸಿ 16800 ರೂ. ಹಾಗೂ ನೀರಾವರಿ ಪ್ರದೇಶಕ್ಕೆ ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 13500ರೂ ಜೊತಗೆ ಹೆಚ್ಚುವರಿ 10 ಸಾವಿರ ರೂ.ನಂತೆ 23,500 ರೂ ಪರಿಹಾರ ಮತ್ತು ಶಾಶ್ವತ ನೀರಾವರಿಯ ಯೋಜನೆಯಡಿ ಬೆಳೆದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್​ಗೆ ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 18 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ ಸೇರಿಸಿ ಒಟ್ಟು 28,000 ರೂ. ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details