ಕರ್ನಾಟಕ

karnataka

ETV Bharat / state

ಕೋವಿಡ್​ ವಾರಿಯರ್ಸ್​ಗೆ ಗುಡ್​​ನ್ಯೂಸ್​​: ಪ್ರೋತ್ಸಾಹ ಧನ ಆರು ತಿಂಗಳವರೆಗೆ ವಿಸ್ತರಣೆ - ಆರೋಗ್ಯ ಸಚಿವ ಸುಧಾಕರ್​

ಕೋವಿಡ್​ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿ ಆರೋಗ್ಯ ಸಚಿವ ಸುಧಾಕರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

incentive for health front line workers
incentive for health front line workers

By

Published : May 28, 2021, 12:13 AM IST

ಬೆಂಗಳೂರು:ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ವಾರಿಯರ್ಸ್​ಗೆ ಇದೀಗ ಆರೋಗ್ಯ ಸಚಿವ ಸುಧಾಕರ್​ ಭರ್ಜರಿ ಕೊಡುಗೆ ಘೋಷಣೆ ಮಾಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಆರು ತಿಂಗಳ ಅವಧಿಯ ಪ್ರೋತ್ಸಾಹ ಧನವನ್ನು ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ಟಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವರು, ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್ ಗಳು ಹಾಗೂ ಡಿ-ಗ್ರೂಪ್ ನೌಕರರಿಗೆ ಈ ವಿಶೇಷ ಭತ್ಯೆ ಘೋಷಿಸಿದ್ದಾರೆ.

ಹೊರಗುತ್ತಿಗೆ ನೌಕರರ ವೇತನ, ರಿಸ್ಕ್ ಭತ್ಯೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ವರೆಗಿನ ಅವಧಿಗೆ ಈಗಾಗಲೇ 82.33 ಕೋಟಿ ಅನುದಾನ ಒದಗಿಸಿದ್ದು, ಹೊಸದಾಗಿ ನೇಮಕ ಆದವರ ಅನುದಾನಕ್ಕೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಕೆಗೆ ಸೂಚಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: CCTV VIDEO: ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್ ಕುಮಾರ್​ ಹಲ್ಲೆ ವಿಡಿಯೋ ವೈರಲ್​​

ಇವರ ಕಾರ್ಯಕ್ಕೆ ಇದೀಗ ಶ್ಲಾಘನೆ ವ್ಯಕ್ತವಾಗಿದ್ದು, ಏಪ್ರಿಲ್​​ನಿಂದ ಅನ್ವಯವಾಗುವಂತೆ ಆರು ತಿಂಗಳ ಅವಧಿಗೆ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ವೈದ್ಯರಿಗೆ 10 ಸಾವಿರ ರೂ. ನರ್ಸ್​ಗಳಿಗೆ ತಿಂಗಳಿಗೆ 5 ಸಾವಿರ, ಪ್ರಯೋಗಶಾಲಾ ತಂತ್ರಜ್ಞರಿಗೆ 5 ಸಾವಿರ ಮತ್ತು ಪಿಪಿಇ ಕಿಟ್​ ಧರಿಸದೇ ಕೋವಿಡ್​ ಆಸ್ಪತ್ರೆಗಳ ಹೊರಗಡೆ ಕಾರ್ಯನಿರ್ವಹಿಸುತ್ತಿರುವ ಗ್ರೂಪ್​ ಡಿ ನೌಕರರಿಗೆ 3 ಸಾವಿರ ರೂನಂತೆ ಆರು ತಿಂಗಳ ಅವಧಿ ನೀಡಲು ತೀರ್ಮಾನಿಸಲಾಗಿದೆ.

ABOUT THE AUTHOR

...view details