ಬೆಂಗಳೂರು:ವಿಶ್ವ ಅಂತಾರಾಷ್ಟ್ರೀಯ ಯೋಗದ ದಿನದ ಅಂಗವಾಗಿ ಇಂದು ದೇಶದಾದ್ಯಂತ ಕೋವಿಡ್ ಲಸಿಕಾಭಿಯಾನ ಆಯೋಜಿಸಲಾಗಿತ್ತು. ಲಸಿಕಾಭಿಯಾನದಲ್ಲಿ 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನ ಹೊಂದಿತ್ತು. ಆದರೆ, ಇಂದು ಅದನ್ನ ಮೀರಿ ಬರೋಬ್ಬರಿ 10,52,272 ಮಂದಿಗೆ ಲಸಿಕೆ ಹಾಕಲಾಗಿದೆ.
ಈ ದೊಡ್ಡ ಲಸಿಕಾ ಅಭಿಯಾನದಲ್ಲಿ ಕರ್ನಾಟಕವು ಇಲ್ಲಿ ತನಕ 1,95,37,428 ಜನರಿಗೆ ಕೋವಿಡ್ ಲಸಿಕೆ ನೀಡಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ 43,89,820 ಮಂದಿಗೆ ಮೊದಲ ಡೋಸ್ ಅನ್ನು ನೀಡಲಾಗಿದ್ದರೆ, 34,871 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಮೊದಲ ಡೋಸ್ನಲ್ಲಿ ಆರೋಗ್ಯ ಕಾರ್ಯಕರ್ತರು 7,45,652 ಮಂದಿ, ಎರಡನೇ ಡೋಸ್ನಲ್ಲಿ 4,91,202 ಮಂದಿ ಪಡೆದಿದ್ದಾರೆ.