ಬೆಂಗಳೂರು:ಇಂದು ಪ್ರಕಟವಾದ ನೀತಿ ಆಯೋಗದ ಇನ್ನೋವೇಷನ್ ವರ್ಗದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿರುವುದರ ಹಿಂದೆ ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಬೇಕು ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ.ಆರ್ ಜನಾರ್ದನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೋವೇಷನ್ ವಿಭಾಗದಲ್ಲಿ ರಾಜ್ಯ ಫಸ್ಟ್: ಎಫ್ಕೆಸಿಸಿಐ ಹರ್ಷ - FKCCI President CR Janardhan latest news
ಇಂದು ಪ್ರಕಟವಾದ ನೀತಿ ಆಯೋಗದ ಇನ್ನೋವೇಷನ್ ವರ್ಗದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದುಕೊಂಡಿದೆ.
ಶತಮಾನಗಳಿಂದಲೂ ಕರ್ನಾಟಕವು ಸಾಕಷ್ಟು ಪ್ರಗತಿಪರ ವಿಷಯಗಳಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದೆ. ಇದಕ್ಕೆ ಮೂಲ ಕಾರಣವೆಂದರೆ ಶಿಕ್ಷಣ, ಮೈಸೂರು ರಾಜರು ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಕರ್ನಾಟಕ ಇಂತಹ ಸಾಧನೆಗಳನ್ನು ಪ್ರತಿಬಾರಿ ಮಾಡುತ್ತ ಬರುತ್ತಿದೆ.
ರಾಜಕೀಯವಾಗಲಿ, ಕೈಗಾರಿಕೆಯಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಕರ್ನಾಟಕ ಪ್ರಗತಿಯನ್ನು ಕಾಣುತ್ತದೆ. ನಮ್ಮ ರಾಜ್ಯ ಸುಭಿಕ್ಷ ವಾಗಿರುವ ಕಾರಣ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಹೀಗಾಗಿ ನೀತಿ ಆಯೋಗ ಪ್ರಕಟಿಸಿದ ಅಗ್ರಸ್ಥಾನ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲದೆ ಮುಂದಿನ ಬಾರಿ ಸ್ವಚ್ಛತೆಯಲ್ಲಿ ನಮ್ಮ ಕರ್ನಾಟಕ ಅಗ್ರಸ್ಥಾನ ಪಡೆಯಬೇಕು, ಕರ್ನಾಟಕವನ್ನು ಸದಾ ಮೊದಲನೆಯ ಸ್ಥಾನದಲ್ಲೇ ಇಡಬೇಕು. ಇದಕ್ಕೆ ಪೂರಕವಾಗಿ ಎಫ್ ಕೆ ಸಿ ಸಿ ಐ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.