ಕೊರೊನಾ ವ್ಯಾಕ್ಸಿನ್ ಹಂಚಿಕೆ : ದೇಶದಲ್ಲಿ ನಮ್ಮ ರಾಜ್ಯಕ್ಕೇ ಫಸ್ಟ್ ರ್‍ಯಾಂಕ್ - ಕೊರೊನಾ ವ್ಯಾಕ್ಸಿನ್ ಹಂಚಿಕೆ
ಕೊರೊನಾ ಲಸಿಕೆ ಹಾಕುವ ವಿಚಾರದಲ್ಲೂ ದೇಶಕ್ಕೆ ಕರ್ನಾಟಕ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿ ನಾಲ್ಕು ದಿನಗಳು ಕಳೆದಿದೆ. ನಾಲ್ಕು ದಿನದಲ್ಲಿ ರಾಜ್ಯದಲ್ಲಿ 80,686 ಮಂದಿ ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ.
ಕೊರೊನಾ ವ್ಯಾಕ್ಸಿನ್
By
Published : Jan 20, 2021, 10:49 AM IST
ಬೆಂಗಳೂರು: ಸಾಂಕ್ರಾಮಿಕ ಕೊರೊನಾ ವೈರಸ್ ತಡೆಗಟ್ಟುವಲ್ಲಿ ದೇಶದ ರೋಲ್ ಮಾಡಲ್ ಸಿಟಿಯಾಗಿ, ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ನಾಲ್ಕು ನಗರಗಳ ಪೈಕಿ ಬೆಂಗಳೂರು ಒಂದಾಗಿತ್ತು.
ಮನೆ ಮನೆಗಳಿಗೆ ಸರ್ವೇ ಕಾರ್ಯ, ಕಂಟೈನ್ಮೆಂಟ್ ಝೋನ್ ಗಳಲ್ಲಿ ರ‍್ಯಾಂಡಮ್ ಟೆಸ್ಟ್, ಫೀವರ್ ಕ್ಲಿನಿಕ್ ಸ್ಥಾಪನೆ, ಕಡಿಮೆ ಅವಧಿಯಲ್ಲಿ ಹೆಚ್ಚು ಲ್ಯಾಬ್ ಗಳ ಸ್ಥಾಪನೆ, ಸ್ವಾಬ್ ಕಲೆಕ್ಟಿಂಗ್ ಬೂತ್ ಸ್ಥಾಪನೆ, ರಾಸಾಯನಿಕ ಸಿಂಪಡಣೆಯ ಟನಲ್ ನಿರ್ಮಿಸಿದ್ದು ಹಾಗೂ ಹಳೆ ಬಸ್ಸನ್ನ ಮೊಬೈಲ್ ಫೀವರ್ ಕ್ಲಿನಿಕ್ ಆಗಿ ಮಾರ್ಪಾಟು ಮಾಡಿ, ಕೊರೊನಾ ವಾರಿಯರ್ಸ್ ಗ್ಲಾಸ್ ಹೆಲ್ಮೆಟ್ ವಿತರಣೆ ಮಾಡಿ, ಹೊಸ ಹೊಸ ಅನ್ವೇಷಣೆ ಮೂಲಕ ಕರ್ನಾಟಕ ಹೆಸರು ಮಾಡಿತ್ತು.
ಇದೀಗ ಕೊರೊನಾ ವ್ಯಾಕ್ಸಿನೇಷನ್ ವಿಚಾರದಲ್ಲಿ ಕರ್ನಾಟಕವೇ ನಂಬರ್ 1 ಆಗಿ ಹೊರಹೊಮ್ಮಿದೆ. ಕೊರೊನಾ ಹತ್ತಿಕ್ಕುವಲ್ಲೂ ಯಶಸ್ಸು ಪಡೆದಿದೆ. ಕೋವಿಡ್ ಟೆಸ್ಟಿಂಗ್ ವಿಚಾರದಲ್ಲೂ ಕರ್ನಾಟಕ ಫಸ್ಟ್ ರ್‍ಯಾಂಕ್, ಈಗ ಕೊರೊನಾ ಲಸಿಕೆ ಹಾಕುವ ವಿಚಾರದಲ್ಲೂ ದೇಶಕ್ಕೆ ಕರ್ನಾಟಕ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿ ನಾಲ್ಕು ದಿನಗಳು ಕಳೆದಿದೆ. ನಾಲ್ಕು ದಿನದಲ್ಲಿ ರಾಜ್ಯದಲ್ಲಿ 80,686 ಮಂದಿ ಕೊರೊನಾ ವ್ಯಾಕ್ಸಿನ್ ಪಡೆದಿದ್ದಾರೆ.