ಬೆಂಗಳೂರು :5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ ಪ್ರಕಾರ ಮಕ್ಕಳ ಅಪೌಷ್ಟಿಕತೆ ಹಾಗೂ ನಿಶಕ್ತಿ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ಏರಿಕೆಯಾಗಿದೆ. 56.6% ಕಲಬುರಗಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಗಣನೀಯವಾಗಿ ಕಡಿಮೆ ತೂಕ ಇರುವ ಮಕ್ಕಳ ಶೇಕಡಾವಾರು 26.1ರಷ್ಟು ಮಕ್ಕಳು ಕರ್ನಾಟಕದಲ್ಲಿದ್ದಾರೆ. ಅಲ್ಲದೆ ದೇಶದಲ್ಲಿ ಶೇ.21ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರಾಗಿದ್ದಾರೆ.