ಕರ್ನಾಟಕ

karnataka

ETV Bharat / state

ದೆಹಲಿ ರೈತರ ಮುಷ್ಕರಕ್ಕೆ ಕರ್ನಾಟಕ ರೈತರ ಸಾಥ್: ರಾಷ್ಟ್ರ ರಾಜಧಾನಿಯಲ್ಲಿ ಸೇರಲು ನಿರ್ಧಾರ

ಸತ್ಯಾಗ್ರಹದಲ್ಲಿ 5-6 ಸಾವಿರ ರೈತರು ಭಾಗವಹಿಸಲಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುತ್ತೇವೆ. ಎಲ್ಲಾ ರೈತರು ದೆಹಲಿಯಲ್ಲಿ ಜಮಾ ಆಗುವಂತೆ ತಿಳಿಸಲಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.‌

Karnataka farmers support for Delhi farmers'Protest
ದೆಹಲಿ ರೈತರ ಮುಷ್ಕರಕ್ಕೆ ಕರ್ನಾಟಕ ರೈತರ ಸಾಥ್

By

Published : Feb 2, 2021, 4:37 PM IST

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ಫೆ. ‌6 ಅಥವಾ 7ರಂದು ದೊಡ್ಡ ಮಟ್ಟದ ರೈತ ಚಳುವಳಿ ನಡೆಸಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.‌

ಸತ್ಯಾಗ್ರಹದಲ್ಲಿ 5-6 ಸಾವಿರ ರೈತರು ಭಾಗವಹಿಸಲಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುತ್ತೇವೆ. ಎಲ್ಲಾ ರೈತರು ದೆಹಲಿಯಲ್ಲಿ ಜಮಾ ಆಗುವಂತೆ ತಿಳಿಸಲಾಗಿದ್ದು, ಇಂದಿನಿಂದಲೇ ನೂರಾರು ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ರೈತ ಮುಖಂಡರಿಂದ ಸುದ್ದಿಗೋಷ್ಠಿ

ಓದಿ : ರೈತರೊಂದಿಗೆ ಯುದ್ಧ ಮಾಡ್ತಿದ್ದೀರಾ?: ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ ಪ್ರಿಯಾಂಕಾ!

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ ಬಜೆಟ್ ಆಗಿದೆ.‌ ಒಟ್ಟು 19 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಿದೆ.‌ ಜನಸಾಮಾನ್ಯರಿಗೆ ಪ್ರತಿಯೊಂದರ ಮೇಲೂ ತೆರಿಗೆ ಹಾಕಲಾಗಿದೆ. ಯಾವುದೇ ಉಪಯೋಗವಿಲ್ಲದ ಬಜೆಟ್ ಇದಾಗಿದೆ ಎಂದು ಹೇಳಿದರು.

ABOUT THE AUTHOR

...view details