ಕರ್ನಾಟಕ

karnataka

ETV Bharat / state

10 ದಿನದಲ್ಲಿ ₹100 ಕೋಟಿ ಸನಿಹ ತಲುಪಿದ ನಗದು, ವಸ್ತು ಜಪ್ತಿ ಮೌಲ್ಯ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯಾದ್ಯಂತ ವಿವಿಧ ಜಾಗೃತ ದಳಗಳು ಅಕ್ರಮ ತಡೆಗೆ ತೀವ್ರ ನಿಗಾ ವಹಿಸಿವೆ.

State Election Commission
ರಾಜ್ಯ ಚುನಾವಣಾ ಆಯೋಗ

By

Published : Apr 9, 2023, 10:38 PM IST

ಬೆಂಗಳೂರು: ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ 99,18,23,457 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಭಾನುವಾರ ಮಾಹಿತಿ ನೀಡಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು ರೂ.36,80,16,674 ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 26,53,97,312 ರೂ. ಮೌಲ್ಯದ 5,20,561 ಲೀಟರ್ ಮದ್ಯ ಜಪ್ತಿ ಮಾಡಿಕೊಂಡಿವೆ. 2,89,77,410 ರೂ. ಮೌಲ್ಯದ 336.81 ಕೆ.ಜಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ತಿಳಿಸಿದೆ.

ಅಬಕಾರಿ ಇಲಾಖೆಯು 1,062 ಗಂಭೀರ ಪ್ರಕರಣಗಳು ಹಾಗೂ ಮದ್ಯದ ಪರವಾನಗಿ ಉಲ್ಲಂಘಿಸಿದ 730 ಪ್ರಕರಣಗಳು, 38 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15(ಎ) ಅನ್ವಯ ಒಟ್ಟು 3,385 ಪ್ರಕರಣಗಳನ್ನು ದಾಖಲಿಸಿದೆ. 685 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿಚಕ್ಷಣ ದಳ, ಸ್ಥಿರ ಕಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 14,93,92,046 ರೂ. ಮೌಲ್ಯದ 34.31 ಕೆ.ಜಿ ಚಿನ್ನ ಹಾಗೂ 17,48,15,643 ರೂ. ಮೌಲ್ಯದ 404.60 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಮಾಹಿತಿ ನೀಡಿದೆ.

ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 792 ಪ್ರಥಮ ತನಿಖಾ ವರದಿಗಳನ್ನು ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 57,126 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. 13 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

11 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 2,509 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 3,740 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 6,227 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ತಂಡಗಳು ಒಟ್ಟು 99,18,23,457 ರೂ. ಮೌಲ್ಯದ ನಗದು ಸೇರಿದಂತೆ ಮದ ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ಇತ್ಯರ್ಥ: ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 3,726 ಕರೆಗಳಲ್ಲಿ 3,663 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 13 ಜನರು ಪ್ರತಿಕ್ರಿಯ ನೀಡಿದ್ದಾರೆ. 15 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 35 ಜನರು ದೂರುಗಳನ್ನು ದಾಖಲಿಸಿದ್ದಾರೆ. ಸ್ವೀಕರಿಸಿದ ಎಲ್ಲಾ 3,726 ಕರೆಗಳ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದಲ್ಲದೇ ಎನ್‌ಜಿಎಲ್​ಆರ್‌ಎಸ್‌ ಪೋರ್ಟ್‌ನಲ್ಲಿ 3100 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು ಅವುಗಳಲ್ಲಿ 2736 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿವಿಜಿಲ್:1760 ದೂರು ಸಿವಿಜಿಲ್ ಅಪ್ಲಿಕೇಷನ್ ಮೂಲಕ ಸ್ವೀಕರಿಸಲಾಗಿದ್ದು ಅವುಗಳಲ್ಲಿ ಪುಮುಖವಾದವು, ಪರವಾನಿಗೆ ಇಲ್ಲದ ಪೋಸ್ಟರ್/ಬ್ಯಾನರ್ ಅಂಟಿಸಿದ 1,015 ಪ್ರಕರಣಗಳು, ಹಣ ಹಂಚಿಕೆ 22, ಉಡುಗೊರೆ ಕೂಪನ್ ಹಂಚಿಕೆ 28, ಮದ್ಯ ಹಂಚಿಕೆ 15, ಹಾಸ್ತಿ ಹಾನಿಗೊಳಿಸಿದ 15, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ 26 ಪ್ರಕರಣಗಳು ಸೇರಿದಂತೆ ಈ ಪೈಕಿ 1,348 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಮಾಧ್ಯಮಗಳಿಂದ ದೂರು: ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದೆ. ಇಮೇಲ್ 110 ಮತ್ತು ಪತ್ರಗಳ ಮೂಲಕ 123, ಸುದ್ದಿಪತ್ರಿಕೆಗಳಿಂದ 28, ಟಿ.ವಿ ಚಾನಲ್‌ಗಳಿಂದ 28 ಮತ್ತು ಸಾಮಾಜಿಕ ಜಾಲತಾಣಗಳಿಂದ 36 ಸೇರಿದಂತೆ ಒಟ್ಟು 325 ದೂರುಗಳು ಬಂದಿದ್ದು, 187 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸುವಿಧಾ: ಆನ್‌ಲೈನ್ ವ್ಯವಸ್ಥೆ ಸುವಿಧಾ ಮೂಲಕ ವಿವಿಧ ಅನುಮತಿ ಕೋರಿ ಒಟ್ಟು 2,552 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 1,472 ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, 688 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 09 ಅರ್ಜಿಗಳು ಪ್ರಗತಿಯಲ್ಲಿವೆ, 302 ಬಾಕಿ ಉಳಿದಿದ್ದು, 51 ಅರ್ಜಿಗಳನ್ನು ಅರ್ಜಿದಾರರೆ ರದ್ದುಪಡಿಸಿದ್ದಾರೆ.

ವಿಶೇಷ ವರದಿ: ಸ್ಥಿರ ಕಾವಲು ತಂಡಗಳು ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರೂ. 34,00,00/- ನಗದು. ಸ್ಥಿರ ಕಣ್ಗಾವಲು ತಂಡವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭೆ ಕ್ಷೇತ್ರದಲ್ಲಿ ರೂ. 20,90,566 ಮೌಲ್ಯದ 56 ಟಿವಿಗಳನ್ನು ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆಯು ರೂ. 1,61,78,756 ಮೌಲ್ಯದ 54,282 ಲೀಟರ್ ಮದ್ಯ ವಶಪಡಿಸಿಕೊಂಡಿದೆ.

ಇದನ್ನೂಓದಿ:ರೇಡಿಯೋ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿನ ಜಾಹೀರಾತುಗಳ ಮೇಲೆ ನಿಗಾ: ಉಜ್ವಲ್ ಕುಮಾರ್ ಘೋಷ್

ABOUT THE AUTHOR

...view details