ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 514 ಮಂದಿಗೆ ಕೋವಿಡ್ ಸೋಂಕು ದೃಢ: 19 ಸೋಂಕಿತರು ಸಾವು - ಕೊರೊನಾ ಡೈಲಿ ಬುಲೆಟಿನ್​

ರಾಜ್ಯದಲ್ಲಿ ಈ ದಿನ 514 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, 1,073 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್​ ಈ ದಿನ 19 ಮಂದಿ ಮೃತಪಟ್ಟಿದ್ದಾರೆ.

Karnataka daily covid bulletin
ಕರ್ನಾಟಕ ಕೊರೊನಾ ವರದಿ

By

Published : Feb 26, 2022, 8:46 PM IST

ಬೆಂಗಳೂರು:ರಾಜ್ಯದಲ್ಲಿಂದು 61,040 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 514 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,40,429 ಕ್ಕೆ ಏರಿಕೆಯಾಗಿದ್ದು,‌ ಪಾಸಿಟಿವ್ ದರ 0.84 ರಷ್ಟಿದೆ.

ಇಂದು 1,073 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 38,93,532 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,940 ರಷ್ಟಿದೆ. ಸೋಂಕಿಗೆ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,919 ಏರಿಕೆ ಕಂಡಿದೆ. ಡೆತ್ ರೇಟ್​​​ ಶೇ 3.69 ರಷ್ಟಿದೆ. ವಿಮಾನ ನಿಲ್ದಾಣದಿಂದ 1943 ಪ್ರಯಾಣಿಕರು ಆಗಮಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 345 ಮಂದಿಗೆ ಸೋಂಕು ದೃಢಪಟ್ಟಿದ್ದು, 17,78,137 ಕ್ಕೆ ಏರಿಕೆಯಾಗಿದೆ. 544 ಮಂದಿ ಡಿಸ್ಜಾರ್ಜ್ ಆಗಿದ್ದು, ಈವರೆಗೆ 17,57,479 ಏರಿಕೆ‌ ಕಂಡಿದೆ. 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,896 ರಷ್ಟಿದೆ. ಸದ್ಯ ರಾಜಧಾನಿಯಲ್ಲಿ 3,761 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4431

ABOUT THE AUTHOR

...view details