ಬೆಂಗಳೂರು : ಕೊರೊನಾಗೆ ಅಂಕುಶವಾಗಿ ಬಂದ ಕೊರೊನಾ ಲಸಿಕಾ ಅಭಿಯಾನ ಹಂತ -ಹಂತವಾಗಿ ಮುನ್ನುಗ್ಗಿದೆ. ರಾಜ್ಯದಲ್ಲಿ ಸುಮಾರು 10 ಕೋಟಿ ಡೋಸ್ ವ್ಯಾಕ್ಸಿನ್ ಹಾಕಿ ಪೂರ್ಣಗೊಳಿಸಲಾಗಿದೆ.
ಈ ಕುರಿತು ಟೀಟ್ವ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಸುಧಾಕರ್, ನಾವು ಇಂದು 10 ಕೋಟಿ ಕೋವಿಡ್ ಡೋಸ್ ಪೂರ್ಣಗೊಳಿಸಿದ್ದು, ಈ ಮೈಲಿಗಲ್ಲು ಸಾಧಿಸಲು ನಮಗೆ 1 ವರ್ಷ, 39 ದಿನಗಳು ಬೇಕಾಯಿತು. ಈ ಅದ್ಭುತ ಸಾಧನೆಗಾಗಿ ಸಹಕರಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.