ಬೆಂಗಳೂರು: ರಾಜ್ಯದಲ್ಲಿಂದು 395 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,40,170ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 395 ಮಂದಿಗೆ ಕೋವಿಡ್ ಪಾಸಿಟಿವ್: ಮೂವರು ಸೋಂಕಿಗೆ ಬಲಿ - ಕರ್ನಾಟಕ ಕೋವಿಡ್ ಅಪ್ಡೇಟ್
ರಾಜ್ಯದಲ್ಲಿ ಇದುವರೆಗೆ 12,223 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು 9,22,004 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, 5,924 ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕ ಕೋವಿಡ್ ಸುದ್ದಿ
ಇಂದು ಮೂವರು ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 12,223 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು 412 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 9,22,004 ಮಂದಿ ಸೋಂಕು ಮುಕ್ತರಾಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 5,924 ಇದ್ದು, 148 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ, ಸೋಂಕಿತರ ಪ್ರಮಾಣ ಶೇ 0.65% ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.75% ರಷ್ಟು ಇದೆ.