ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1,279 ಮಂದಿಗೆ ಕೋವಿಡ್​ ದೃಢ : 20 ಸೋಂಕಿತರು ಬಲಿ - ಕರ್ನಾಟಕ ಕೋವಿಡ್​ ಸೋಂಕಿತರ ಸಂಖ್ಯೆ

ಇಂದು 3,218 ಜನರು ಗುಣಮುಖರಾಗಿದ್ದು, ಈವರೆಗೆ 8,61,588 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, 265 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದು, 23,056 ಸಕ್ರಿಯ ಪ್ರಕರಣಗಳಿವೆ..

Karnataka Covid Update
ಕರ್ನಾಟಕದಲ್ಲಿ ಕೋವಿಡ್​ ಪ್ರಕರಣ

By

Published : Dec 9, 2020, 8:23 PM IST

ಬೆಂಗಳೂರು : ರಾಜ್ಯದಲ್ಲಿ ಇಂದು 1,279 ಹೊಸ ಕೋವಿಡ್​ ಪ್ರಕರಣ ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 8,96,563ಕ್ಕೆ ಏರಿಕೆ ಆಗಿದೆ.

ಇಂದು 20 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,900 ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 1.26 ಹಾಗೂ ಸಾವಿನ ಪ್ರಮಾಣ ಶೇ 1.56 ರಷ್ಟು ಇದೆ.‌

ಇದನ್ನೂ ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ನಾಳೆ ನಾವು ಕಲಾಪ ಬಹಿಷ್ಕರಿಸುತ್ತೇವೆ ಎಂದ ಸಿದ್ದರಾಮಯ್ಯ

ಇಂದು 3,218 ಜನರು ಗುಣಮುಖರಾಗಿದ್ದು, ಈವರೆಗೆ 8,61,588 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, 265 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದು, 23,056 ಸಕ್ರಿಯ ಪ್ರಕರಣಗಳಿವೆ.

ಕಳೆದ 7 ದಿನಗಳಲ್ಲಿ 27,321 ಜನರು ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು 1,02,466 ಹಾಗೂ ದ್ವಿತೀಯ ಸಂಪರ್ಕ ಹೊಂದಿದ 1,20,245 ಜನರು ಇದ್ದಾರೆ.

ABOUT THE AUTHOR

...view details