ಕರ್ನಾಟಕ

karnataka

ETV Bharat / state

ಇಳಿಕೆಯತ್ತ ಮುಖ ಮಾಡಿದ ಕೋವಿಡ್​​​​​: ಇಂದು 5,356 ಪಾಸಿಟಿವ್ - 8,749 ಮಂದಿ ರೋಗ ಮುಕ್ತ - ಕರ್ನಾಟಕ ಕೋವಿಡ್​ ಪ್ರಕರಣ

ರಾಜ್ಯದಲ್ಲಿ ಇಂದು 8,749 ಮಂದಿ ಕೋವಿಡ್​ ಮುಕ್ತರಾಗಿದ್ದು, ಹೊಸದಾಗಿ 5,356 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Karnataka Covid Update
ಕರ್ನಾಟಕ ಕೋವಿಡ್​ ಅಪ್ಡೇ

By

Published : Oct 23, 2020, 7:15 PM IST

ಬೆಂಗಳೂರು : ರಾಜ್ಯದಲ್ಲಿಂದು ಹೊಸದಾಗಿ 5,356 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,93,907 ಆಗಿದೆ.

‌ಇಂದು 8,749 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 6,93,584 ಜನರು ಸೋಂಕು ಮುಕ್ತರಾಗಿದ್ದಾರೆ. ಇಂದು, ರಾಜ್ಯಾದ್ಯಂತ 51 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಬಲಿಯಾದವರ ಸಂಖ್ಯೆ 10,821 ಆಗಿದೆ. ಇಂದು, 19 ಜನ ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.

ಪ್ರಸ್ತುತ 89,483 ಸಕ್ರಿಯ ಪ್ರಕರಣಗಳಿದ್ದು, 936 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವವರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂದಿದ್ದು, ಪ್ರಸ್ತುತ 79,457 ಮಂದಿ ಹೋಂ ಕ್ವಾರಂಟೈನ್​ಲ್ಲಿದ್ದಾರೆ. ಪ್ರಾಥಮಿಕ ಸಂಪರ್ಕಿತರು 4,77,836 ದ್ವಿತೀಯ ಸಂಪರ್ಕಿತರು 4,43,820 ಮಂದಿ ಇದ್ದಾರೆ.

ABOUT THE AUTHOR

...view details