ಬೆಂಗಳೂರು:ರಾಜ್ಯದಲ್ಲಿ ಬುಧವಾರ 23,246 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 6,65,11,106 ಮಂದಿಯ ಮೇಲೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇಂದು 376 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 231 ಜನ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯ ತನಕ ಒಟ್ಟು 39,11,582 ಮಂದಿ ಗುಣಮುಖರಾಗಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟರ ಸಂಖ್ಯೆ ಶೂನ್ಯವಾಗಿದೆ.
ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 2,623 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.1.61 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ.1.64 ರಷ್ಟಿದೆ. ಸಾವಿನ ಪ್ರಮಾಣ ಶೂನ್ಯವಾಗಿದೆ. ವಾರದ ಸಾವಿನ ಪ್ರಮಾಣ ಶೇ. 0.04 ರಷ್ಟಿದೆ.