ಬೆಂಗಳೂರು:ರಾಜ್ಯದಲ್ಲಿ ಇಂದು 27,668 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,286 ಜನರಿಗೆ ಕೊರೊನಾ ಸೋಂಕು ತಗುಲಿದೆ. 2,358 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. 8,700 ಕೋವಿಡ್ ಸಕ್ರಿಯ ಪ್ರಕರಣಗಳು ಇವೆ.
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 4.64, ವಾರದ ಸೋಂಕಿತರ ಪ್ರಮಾಣ ಶೇ. 4.96 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.25 ಇದೆ. ವಿಮಾನ ನಿಲ್ದಾಣದಿಂದ ಯಾರೊಬ್ಬರೂ ತಪಾಸಣೆಗೆ ಒಳಪಟ್ಟಿಲ್ಲ.